ಹುಬ್ಬಳ್ಳಿ: ಪ್ರಧಾನ ಮಂತ್ರಿ ಸುರಕ್ಷಾ ಮಾತೃ ಅಭಿಯಾನದ ಅಡಿಯಲ್ಲಿ, ನಗರದ ಕಿಮ್ಸ್ ಆಸ್ಪತ್ರೆಯ ಗರ್ಭಿಣಿ ಮತ್ತು ಹೆರಿಗೆ ವಿಭಾಗದಲ್ಲಿ 50 ಜನಕ್ಕೆ ಸಾಮೂಹಿಕ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.
ಕರ್ನಾಟಕ ಏಡ್ಸ್ ಪ್ರಿವ್ಸೆನಷನ್ ಸೊಸೈಟಿ ಬೆಂಗಳೂರು ಎಚ್.ಐ.ವಿ. ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ತಾಯಿಯಿಂದ ಮಗುವಿಗೆ ಎಚ್.ಐ.ವಿ ತಡೆಗಟ್ಟುವ ಕಾರ್ಯಕ್ರಮ ಹಾಗೂ ನಿರ್ಮೂಲನಾ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂಟರಟಾನಿ, ಡಾ. ಅರುಣಕುಮಾರ್, ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಕಸ್ತೂರಿ ದೋಣಿಮಠ, ಸವಿತಾ ಮತ್ತು ವಿಭಾಗದ ಸಿಬ್ಬಂದಿಗಳೊಂದಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
Kshetra Samachara
09/03/2022 08:51 pm