ಹುಬ್ಬಳ್ಳಿ : ಕನ್ನಡ ಸಿನಿಮಾ ರಂಗದಲ್ಲಿಯೇ ಹೊಸ ಸದ್ದನ್ನು ಮಾಡಲು ಶುಭಮಂಗಳ ಸಿನಿಮಾ ಸಿದ್ಧವಾಗಿದೆ. ರಾಜ್ಯಾದ್ಯಂತ ಇದೇ 14ರಂದು ಲೋಕಾರ್ಪಣೆಗೊಳ್ಳಲಿರುವ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.
ಹೌದು.. ಸಂತೋಷ ಗೋಪಾಲ ನಿರ್ದೇಶನದ ಶುಭಮಂಗಳ ಸಿನಿಮಾ ಕೌಟುಂಬಿಕ ಹಾಗೂ ಮನರಂಜನೆ ಚಿತ್ರವಾಗಿ ನಿರ್ಮಾಣಗೊಂಡಿದೆ. ಒಂದು ಮದುವೆಯ ಬಗ್ಗೆ ಐದು ರೀತಿಯ ಕಥಾಹಂದಿರದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಗತಿಸಿದ ಸುಂದರ ದಿನಗಳನ್ನು ಮೆಲುಕು ಹಾಕುತ್ತಾ ಮುಂದೊಂದು ದಿನ ನೆನಪಿಸಿಕೊಂಡು ಪುಳಕಗೊಳ್ಳುವ ರೀತಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಹಾಗಿದ್ದರೇ ಚಿತ್ರದ ಬಗ್ಗೆ ನಿರ್ದೇಶಕರು ಏನು ಹೇಳ್ತಾರೆ ಕೇಳಿ.
ಇನ್ನೂ ಶುಭಮಂಗಳ ಚಿತ್ರವು ವಧುವರರ ಮುಖ್ಯ ಕಥೆಯ ಜೊತೆಗೆ ಬೇರೆ ಕಥೆಗಳನ್ನು ಹೇಳುವ ಕನ್ನಡ ಸಿನಿಮಾ ರಂಗದಲ್ಲಿ ವಿನೂತನ ರೀತಿಯಲ್ಲಿ ನಿರ್ಮಾಣಗೊಂಡಿರುವ ಸಿನಿಮಾ ಆಗಿದೆ. ಮದುವೆಯ ಮನೆಯೆಂದರೇ ಸುಂದರ ರಂಗೋಲಿ ಎಂಬುವಂತೇ ಅದೆಷ್ಟೋ ಸಾಲು ಅದೆಷ್ಟೋ ಬಣ್ಣಗಳಂತೆ ವಿನೂತನ ರೀತಿಯಲ್ಲಿ ನಿರ್ಮಾಣಗೊಂಡಿದೆ. ಹಾಗಿದ್ದರೇ ಈ ಸಿನಿಮಾ ಬಗ್ಗೆ ನಟ ನಟಿಯರು ಏನು ಹೇಳ್ತಾರೆ ಕೇಳಿ.
ಒಟ್ಟಿನಲ್ಲಿ ಅಕ್ಟೋಬರ್ 14ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಕಥೆಯ ಜೊತೆಗೆ ಸಂಗೀತ ಸಂಯೋಜನೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/10/2022 05:53 pm