ಹುಬ್ಬಳ್ಳಿ: ಇದೇ ಡಿಸೆಂಬರ್ 20ರಂದು 'ಯುಐ' ಚಿತ್ರ ದೇಶಾದ್ಯಂತ ಐದು ಭಾಷೆಗಳಲ್ಲಿ ತೆರೆಗೆ ಕಾಣಲಿದೆ. ಯುಐ ಟೈಟಲ್ ಏನು ಅಂತ ನೀವೇ ಹೇಳಬೇಕು. ಇಲ್ಲಾಂದ್ರೆ ಹೆಸರೇ ಇಟ್ಟು ಬಿಡ್ತಿದ್ದೆ. ಚಿತ್ರಮಂದಿರದಲ್ಲಿ ವೀಕ್ಷಕರು ಹೀರೋನಂತೆ ವಿಜೃಂಭಿಸಬೇಕು ಅನ್ನೋದು ನನ್ನ ಆಸೆ ಎಂದು ನಟ ಉಪೇಂದ್ರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದಲ್ಲಿ ಪ್ರತಿಯೊಂದಕ್ಕೂ ಒಂದು ಅರ್ಥ ಇದೆ. ಆ ಅರ್ಥ ನೀವೆಲ್ಲ ಅದ್ಭುತವಾಗಿ ಅರ್ಥಮಾಡ್ಕೋತೀರಾ ಅಂತ ನನಗೆ ಗೊತ್ತು. ಟೀಸರ್ ನೋಡಿದ್ರೆ ವಾರ್ನರ್ ಏನು ಅನ್ನೋದು ಅರ್ಥ ಆಗುತ್ತೆ. ರೆಗ್ಯುಲರ್ ಟ್ರೇಲರ್ ತರ ಈ ಚಿತ್ರ ಇರೋದಿಲ್ಲ. ಈ ಚಿತ್ರ ಯಾವ ರೀತಿ ಅಂತ ನಾನೇ ಹೇಳೋದು ಕಷ್ಟ. ಥೇಟರ್‌ಗೆ ಬಂದ್ರೆ ನಿಮಗೂ ಲಾಭ, ನಮಗೂ ಲಾಭ. ಸಿನಿಮಾ ಯಾವತ್ತೂ ಥಿಯೇಟರ್‌ನಲ್ಲೇ ನೋಡಬೇಕು ಅಂದ್ರೆ ಮಜಾ. ಜನ ಹೊಸದೇನೋ ಕೊಡ್ತಾರೆ ಅಂತ ಕಾಯ್ತಾರೆ. ಅದಕ್ಕೆಲ್ಲ ನಮಗೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತೆ. ಯುಐ ಚಿತ್ರದ ಎರಡನೇ ಭಾಗ ಬರುತ್ತಾ ಎಂಬ ಪ್ರಶ್ನೆಗೆ ನಾನು ಯಾವ ಟ್ರೆಂಡ್ ಕೂಡ ಫಾಲೋ ಮಾಡಲ್ಲ ಎಂದು ಉಪ್ಪಿ ಉತ್ತರಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 08:34 pm