ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಅಭಿಮಾನಿಗಳ ಸಂಭ್ರಮ ಮಾಡಿದ್ದು, "ನಮ್ಮ ಬಾಸು ಯಾರು? ಚಾಲೆಂಜಿಂಗ್ ಸ್ಟಾರು" ಎಂದು ಘೋಷಣೆ ಕೂಗುತ್ತಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಮ್ಮ ದೇವರು. ದೇವರಿಗೆ ಜಾಮೀನು ಸಿಕ್ಕಿದ್ದು ಖುಷಿ ತಂದಿದೆ. ನಮ್ಮ ಬಾಸ್ ಹೆಸರಿನ ಮೇಲೆ ಸಿದ್ದಾರೂಢರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತೇವೆ. ದೇವರ ಆರೋಗ್ಯ ಬೇಗ ಸುಧಾರಿಸಲಿ, ಬೆಳ್ಳಿ ತೆರೆಯ ಮೇಲೆ ನಮ್ಮ ಬಾಸ್ ಬರಲಿ ಎಂದು ಅಭಿಮಾನಿಗಳು ಹಾರೈಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/12/2024 08:07 pm