ಹುಬ್ಬಳ್ಳಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುಬ್ಬಳ್ಳಿ ಹುಡುಗನ ಕಥೆಯನ್ನು ಆಧರಿಸಿ ನಾರಾಯಣ ಮಹದೇವ ಧೋನಿ ಚಿತ್ರವನ್ನು ಮಾಡಲಾಗಿದ್ದು, ಜುಲೈ 8 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಹಾಗೂ ನಟ ಶೈನ್ ಚಿಣ್ಣಾ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣ ಮಹದೇವ ಧೋನಿ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಈ ಚಿತ್ರವನ್ನು ಮಾಡಲಾಗಿದೆ. ಮೊದಲಿಗೆ ಬಂದವರಿಗೆ 100 ಕುಟುಂಬಕ್ಕೆ ಉಚಿತವಾಗಿ ಟಿಕೆಟ್ ನೀಡಲಾಗುತ್ತದೆ ಎಂದರು. ಈ ಚಿತ್ರವನ್ನು ಉತ್ತರ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
Kshetra Samachara
22/06/2022 03:17 pm