ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಧ್ಯಾಹ್ನವೂ ಕಳೆಗುಂದಲಿಲ್ಲ ಕೆಜಿಎಫ್ ಕ್ರೇಜ್

ಧಾರವಾಡ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಇಂದು ತೆರೆ ಕಂಡಿದೆ. ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಮಧ್ಯಾಹ್ನವೂ ಯಶ್ ಅಭಿಮಾನಿಗಳು ಕೆಜಿಎಫ್ ಕ್ರೇಜ್‌ನಲ್ಲೇ ಇದ್ದರು. ಮೊದಲ ಶೋ ಆರಂಭವಾಗುವ ಮುನ್ನ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು.

ಮಧ್ಯಾಹ್ನ ಬಿಸಿಲನ್ನೂ ಲೆಕ್ಕಿಸದೇ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮ ನೆಚ್ಚಿನ ನಟನ ಚಿತ್ರ ನೋಡಿ ಸಂಭ್ರಮಿಸಿದರು. ಅಲ್ಲದೇ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ಯಶ್ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

Edited By :
Kshetra Samachara

Kshetra Samachara

14/04/2022 08:21 pm

Cinque Terre

15.15 K

Cinque Terre

0

ಸಂಬಂಧಿತ ಸುದ್ದಿ