ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊರನಡೆದ 'ಜೇಮ್ಸ್‌'.. 'RRR' ಗೆ ಜೈ ಎಂದ ಪ್ರೇಕ್ಷಕ

ಧಾರವಾಡ: ಧಾರವಾಡದ ವಿಜಯ ಚಿತ್ರಮಂದಿರದಲ್ಲಿ ಕೇವಲ ಒಂದು ವಾರದ ಮಟ್ಟಿಗೆ ತೆರೆ ಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ 'ಜೇಮ್ಸ್' ಚಿತ್ರವನ್ನು ತೆಗೆದು ಹಾಕಿ ಇದೀಗ ಅಲ್ಲಿ ಜ್ಯೂನಿಯರ್ ಎನ್‌ಟಿಆರ್ ಹಾಗೂ ರಾಮ್‌ ಚರಣ ತೇಜ ಅಭಿನಯದ RRR ಚಿತ್ರವನ್ನು ಹಾಕಲಾಗಿದೆ.

ರಾಜ್ಯದ ಅನೇಕ ಕಡೆಗಳಲ್ಲಿ ಜೇಮ್ಸ್ ಚಿತ್ರ ತೆಗೆದು ಹಾಕಿದ್ದಕ್ಕೆ ಪುನೀತ್ ರಾಜಕುಮಾರ ಅಭಿಮಾನಿಗಳು ಗಲಾಟೆಯನ್ನುಂಟು ಮಾಡುತ್ತಿದ್ದಾರೆ. ಆದರೆ, ಧಾರವಾಡದ ವಿಜಯ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರವನ್ನು ಕೇವಲ ಒಂದು ವಾರ ಪ್ರದರ್ಶನ ಮಾಡುವುದಕ್ಕಾಗಿ ಪರವಾನಿಗಿ ಪಡೆದುಕೊಳ್ಳಲಾಗಿತ್ತು. ಆ ಪ್ರಕಾರ ಇದೀಗ ಜೇಮ್ಸ್ ಚಿತ್ರ ತೆಗೆದು ಅಲ್ಲಿ RRR ಚಿತ್ರ ಹಾಕಲಾಗಿದೆ. ಇಲ್ಲಿ ಯಾವುದೇ ಗಲಾಟೆ, ಗದ್ದಲಗಳು ಉಂಟಾಗಿಲ್ಲ.

ವಿಜಯ ಚಿತ್ರಮಂದಿರ ಹೊರತುಪಡಿಸಿ ಧಾರವಾಡದ ಪ್ರತಿಷ್ಠಿತ ಪದ್ಮಾ ಚಿತ್ರಮಂದಿರದಲ್ಲಿ ಜೇಮ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Edited By : Manjunath H D
Kshetra Samachara

Kshetra Samachara

25/03/2022 12:55 pm

Cinque Terre

28.28 K

Cinque Terre

2

ಸಂಬಂಧಿತ ಸುದ್ದಿ