ಹುಬ್ಬಳ್ಳಿ: 'ನರಗುಂದ ಬಂಡಾಯ' ಇದು ಒಂದು ನೈಜ ಘಟನೆಯ ಚಿತ್ರ. ದೊಡ್ಡದಾದ ಇತಿಹಾಸ ಹೊಂದಿದ ಮಹಾದಾಯಿ ಹೋರಾಟದಲ್ಲಿ ರೈತರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟ ರಕ್ಷ್ ಪಬ್ಲಿಕ್ ನೆಕ್ಸ್ಟ್ ಮೂಲಕ ಹೇಳಿದ್ದಾರೆ.
'ನರಗುಂದ ಬಂಡಾಯ' ಅದ್ಭುತವಾದ ಚಿತ್ರ, ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣ ಮಾಡಬೇಕೆಂದರೆ ತುಂಬಾ ಖುಷಿಯಾಗುತ್ತದೆ. ಎಲ್ಲರೂ ಬಂದು ಸಿನಿಮಾ ನೋಡಿ ನರಗುಂದ ಬಂಡಾಯದ ಬಗ್ಗೆ ತಿಳಿದುಕೊಳ್ಳಿ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/03/2022 07:26 pm