ಧಾರವಾಡ : ಪುನೀತ್ ರಾಜ್‌ಕುಮಾರ್ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ‘ಯುವರತ್ನ’ ಚಿತ್ರೀಕರಣದ ಸಂದರ್ಭದಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದುದ್ದನ್ನು ಕಂಡು ಯುವಕರು ನೆಚ್ಚಿನ ನಟನಿಗೆ ಜಯಘೋಷ ಹಾಕುತ್ತಿದ್ದರು. ಆದರೆ ಶುಕ್ರವಾರ ಪುನೀತ್ ಹಠಾತ್ ನಿಧನದ ಸುದ್ದಿ ಅಭಿಮಾನಿಗಳಲ್ಲಿ ಅವರ ನಿಧನದ ಸುದ್ದಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ
ಅಪ್ಪು ಅವರ ಕೊನೆಯ ಚಿತ್ರ ಚಿತ್ರೀಕರಣಗೊಂಡ ನಮ್ಮ ಧಾರವಾಡ ದ ಕರ್ನಾಟಕ ಕಾಲೇಜ್ ಆವರಣದಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಹಾಗೂ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಹೂವು ಹಾಕಿ ಶೃದ್ಧಾಂಜಲಿ ಸಲ್ಲಿಸಿದರು.
Kshetra Samachara
30/10/2021 11:08 am