ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೊಡ್ಡಮನೆ ಹುಡುಗ... ಸಿದ್ಧಾರೂಢರ ಪರಮ ಭಕ್ತ ಪುನೀತ್

ಹುಬ್ಬಳ್ಳಿ: ದೊಡ್ಡದಾಗಿ ಹೆಸರು ಮಾಡಿದ್ದ ದೊಡ್ಡಮನೆ ಹುಡುಗ ಪುನೀತ್ ರಾಜಕುಮಾರ ವಾಣಿಜ್ಯನಗರಿ ಹುಬ್ಬಳ್ಳಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ. ಯಾವುದೇ ಸಿನಿಮಾದ ಪ್ರೋಮೊಷನ್ ಗೆ ಹುಬ್ಬಳ್ಳಿಗೆ ಆಗಮಿಸಿದರೂ ಸಿದ್ಧಾರೂಡರ ದರ್ಶನ ಪಡೆಯುತ್ತಿದ್ದ ಪವರ್ ಸ್ಟಾರ್ ಇಂದು ಅಭಿಮಾನಿ ಬಳಗವನ್ನೇ ಅಗಲಿ ದೂರಾಗಿದ್ದಾರೆ.

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣದಿಂದ ಎತ್ತ ಸಂಬಂಧವಯ್ಯ ಎಂಬುವಂತೇ ಬೆಂಗಳೂರಿನಲ್ಲೇ ಇದ್ದರೂ ರಾಜ ಕುಟುಂಬ ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಭಕ್ತರು. ಡಾ.ರಾಜಕುಮಾರ ಅವರು ರಂಗಭೂಮಿ ಕಲಾವಿದರಾಗಿದ್ದ ಸಂದರ್ಭದಲ್ಲಿ ಕೂಡ ಹುಬ್ಬಳ್ಳಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು.

ಯುವರತ್ನ ಚಿತ್ರದ ಪ್ರಮೋಶನ್‌ಗಾಗಿ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ಅಪ್ಪು ಗೋಕುಲ ರಸ್ತೆಯಲ್ಲಿನ ಅರ್ಬನ್ ಓಯಾಸಿಸ್ ಮಾಲ್ ಎದುರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಅವರ ಕೊನೆಯ ಭೇಟಿಯಾಗಿತ್ತು. ತಂದೆ ನಟಸಾರ್ವಭೌಮ ಡಾ.ರಾಜಕುಮಾರರಂತೆ ಹುಬ್ಬಳ್ಳಿಗೆ ಬಂದಾಗಲೆಲ್ಲ ಪುನೀತ್ ಶ್ರೀ ಸಿದ್ಧಾರೂಢ ಮಠಕ್ಕೆ ಸಹ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆಯ ದರ್ಶನ ಪಡೆಯುತ್ತಿದ್ದರು.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

29/10/2021 05:32 pm

Cinque Terre

56.79 K

Cinque Terre

7

ಸಂಬಂಧಿತ ಸುದ್ದಿ