ಧಾರವಾಡ: ಕೊರೊನಾದಿಂದಾಗಿ ಸಪ್ಪೆಯಾಗಿದ್ದ ಚಿತ್ರಮಂದಿರಗಳು ಇದೀಗ ರಂಗು ಪಡೆದುಕೊಂಡಿವೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಪೊಗರು ಚಿತ್ರ ಇಂದು ತೆರೆಗೆ ಅಪ್ಪಳಿದ್ದು, ಅಭಿಮಾನಿಗಳ ಹರ್ಷ ಇಮ್ಮಡಿಗೊಳಿಸಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ ಮೊದಲ ಪ್ರದರ್ಶನ ಹೌಸಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಧ್ರುವ ಸರ್ಜಾ ಅವರ ಅಭಿಮಾನಿಗಳು ಧ್ರುವ ಅವರ ಕಟೌಟ್ ಗೆ ಹಾಲು ಹಾಗೂ ಹೂವಿನ ಅಭಿಷೇಕ ಮಾಡಿದರು.
ಸಿನಿಮಾ ಪೋಸ್ಟರ್ ಮುಂದೆ ಕುಂಬಳಕಾಯಿ ಒಡೆದು ಸಿನಿಮಾ ಅದ್ಧೂರಿಯಾಗಿ ಪ್ರದರ್ಶನ ಕಾಣಲಿ ಎಂದು ಬೇಡಿಕೊಂಡರು. ಇತ್ತ ಚಿತ್ರ ಮಂದಿರದ ಒಳಗೆ ಸಿನಿ ಪ್ರಿಯರು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಅದ್ಧೂರಿಯಾಗಿಯೇ ಪೊಗರು ಚಿತ್ರ ಬರ ಮಾಡಿಕೊಂಡರು.
ಒಟ್ಟಾರೆ ಕೊರೊನಾದಿಂದಾಗಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಇದೀಗ ತೆರೆದಿದ್ದು, ಸಿನಿಪ್ರಿಯರಿಗೆ ಖುಷಿಯನ್ನುಂಟು ಮಾಡಿದೆ.
Kshetra Samachara
19/02/2021 01:28 pm