ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮರೆಯಾಯಿತು ಕನ್ನಡ ಪ್ರೇಮ ಮೆರೆದ " ಸಂಜೋತ!"

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಅರ್ಧ ಶತಮಾನದಷ್ಟು‌ ಕಾಲ, ಕೇವಲ‌ ಕನ್ನಡ ಭಾಷೆ ಚಿತ್ರಗಳನ್ನು ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆಯುತ್ತಿದ್ದ ಹುಬ್ಬಳ್ಳಿಯ ಸಂಜೋತಾ ಚಿತ್ರಮಂದಿರ, ಈಗ ಕಾಯಂ ಆಗಿ ಬಾಗಿಲು ಮುಚ್ಚಿದ್ದು, ಇನ್ನು ‌ಮುಂದೆ ಸಂಜೋತ ಥಿಯೇಟರ್ ಕೇವಲ ನೆನಪು ಮಾತ್ರ..

ಒಂದೆಡೆ ಮಲ್ಟಿಫ್ಲೆಕ್ಸ್, ಮೊಬೈಲ್ ಹಾವಳಿ, ಮತ್ತೊಂದೆಡೆ ಕೊರೊನಾ ಹೊಡೆತ ಮನರಂಜನಾ ವಲಯವನ್ನು ಇನ್ನಿಲ್ಲದೆ ಕಾಡುತ್ತಿದೆ. ಇದರ ಪರಿಣಾಮ ಕನ್ನಡ ಚಿತ್ರಮಂದಿರವೊಂದನ್ನು ಕನ್ನಡಿಗರು ಕಳೆದುಕೊಂಡಂತಾಗಿದೆ. ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ಪಕ್ಕದಲ್ಲಿ ಈ ಸಂಜೋತಾ ಚಿತ್ರಮಂದಿರ ಇದ್ದು, 1976 ರಲ್ಲಿ ಪ್ರಾರಂಭವಾಗಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತಿತ್ತು. ಈ ಚಿತ್ರಮಂದಿರ ಪ್ರಾರಂಭವಾದಾಗಿನಿಂದಲೂ ಒಂದೇ ಒಂದು ಪರಭಾಷೆ ಚಿತ್ರವನ್ನು ಇಲ್ಲಿ ಪ್ರದರ್ಶಿಸಿಲ್ಲ. ನಿತ್ಯವೂ ಕನ್ನಡ ಡಿಂಡಿಮ ಮೊಳಗುತ್ತಿತ್ತು. ಎಷ್ಟೇ ಒತ್ತಡ, ಬಲವಂತ ಬಂದರೂ ಸಂಜೋತಾದ ಮಾಲೀಕರು ಮಾತ್ರ ಕನ್ನಡ ಭಾಷೆ ಬಿಟ್ಟು ಬೇರೆ ಚಿತ್ರಗಳನ್ನು ಪ್ರದರ್ಶಿಸದೆ ಇರುವುದು ಇತಿಹಾಸ.

ಶ್ರೀನಾಥ, ಮಂಜುಳಾ ಜೋಡಿಯ ಅಭಿನಯದ ‘ಪ್ರಣಯರಾಜ’ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ. ಆನಂತರ ಡಾ.ರಾಜ್ ಕುಮಾರ್, ಶ್ರೀನಾಥ, ಶಂಕರನಾಗ್, ಶಿವರಾಜಕುಮಾರ, ರವಿಚಂದ್ರನ್, ವಿಷ್ಣುವರ್ಧನ್ ಅಂಬರೀಶ್ ಹೀಗೆ ಹತ್ತಾರು ನಟರ ನೂರಾರು ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಎಷ್ಟೋ ಚಿತ್ರಗಳು ಶತಮಾನೋತ್ಸವ ಕಂಡಿವೆ. ಆದ್ರೆ ಚಿತ್ರಮಂದಿರ ಬಂದ್ ಆಗಿರುವುದು ಚಿತ್ರಪ್ರೇಮಿಗಳಿಗೆ ನಿರಾಶೆಯನ್ನುಂಟು ಮಾಡಿದೆ.

ಹೀಗೆ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತಾಾ ಕನ್ನಡಪ್ರೇಮ ಮೆರೆಯುತ್ತಿದ್ದ, ಕನ್ನಡಾಂಬೆಗೆ ತನ್ನದೇ ರೀತಿಯಲ್ಲಿ ವಂದಿಸುತ್ತಿದ್ದ, ಸಂಜೋತಾ ಟಾಕೀಸ್ ಇದೀಗ ಕಾಯಂ ಆಗಿ ಬಂದ್ ಆಗಿದೆ. ಇದರಿಂದ ಕನ್ನಡ ಚಿತ್ರಮಂದಿರವೊಂದನ್ನು ಕನ್ನಡದ ಪ್ರೇಕ್ಷಕರು ಕಳೆದುಕೊಂಡಂತಾಗಿರುವುದಂತೂ ಸತ್ಯ. ಇದು ಕನ್ನಡಾಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.

Edited By : Nagesh Gaonkar
Kshetra Samachara

Kshetra Samachara

25/10/2020 04:15 pm

Cinque Terre

43.99 K

Cinque Terre

10

ಸಂಬಂಧಿತ ಸುದ್ದಿ