ಬೆಳಗಾವಿ: ಹಲವು ದಶಕಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕನ್ನಡಿಗರಿನ್ನ ಭಾಷೆ ಮತ್ತು ಗಡಿ ವಿಷಯಕ್ಕೆ ಆಗಾಗ ಕೆರಳಿಸುತ್ತಾ ಬಂದಿದ್ದಾರೆ. ಅದರಲ್ಲೂ ಕರ್ನಾಟಕ ರಾಜ್ಯೋತ್ಸವ ಹತ್ತಿರ ಬಂದ್ರೆ ಸಾಕು ಎಂಇಎಸ್ ಪುಂಡರು ಕನ್ನಡಿಗರ ಹಾಗು ಕನ್ನಡದ ಭಾಷೆಯ ಮೇಲೆ ಏನಾದ್ರು ಕಿರಿಕ್ ಮಾಡಿ ತಗಾದೆ ತೆಗೆಯತ್ತಾರೆ. ಈ ವರ್ಷವು ಎಂಇಎಸ್ ಪುಂಡರು ಮರಾಠಿ ಬಾಯ್ಸ್-3 ಚಿತ್ರವೊಂದರಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಿ ಮತ್ತೆ ಕನ್ನಡಿಗರನ್ನ ಭಾವನೆಗಳನ್ನ ಕೆರಳಿಸಿದ್ದಾರೆ.
ಹೌದು, ಕರ್ನಾಟಕ ರಾಜ್ಯೋತ್ಸವಕ್ಕೆ ಇನ್ನೇನು ಒಂದುವರೆ ತಿಂಗಳು ಬಾಕಿ ಈರುವವಂತೆ ಗಡಿ ಜಿಲ್ಲೆಯಲ್ಲಿ ಕನ್ನಡ-ಮರಾಠಿ ಭಾಷಿಕರ ನಡುವೆ ಮತ್ತೇ ವಿವಾದ ಸೃಷ್ಟಿಸುವಂತೆ ಎಂಇಎಸ್ ಮಾಡಿದೆ. ಗಡಿ ವಿವಾದದ ಕುರಿತು ಮರಾಠಿ ಚಿತ್ರ ಬಿಡುಗಡೆಗೆ ಮಾಡಿ ಕನ್ನಡಿಗರನ್ನು ಭಾವನೆಗಳಿಗೆ ದಕ್ಕೆ ಮಾಡಿದ್ದರೆ.
ಇಂದು ಮಹಾರಾಷ್ಟ್ರ ಸೇರಿ ವಿವಿಧೆಡೆ ಬಿಡುಗಡೆ ಆಗುತ್ತಿರುವ 'ಬಾಯ್ಸ್ 3' ಮರಾಠಿ ಚಿತ್ರವನ್ನು ಕರ್ನಾಟಕದಲ್ಲಿ ಹಾಗು ಬೆಳಗಾವಿಯಲ್ಲಿ ಬ್ಯಾನ್ ಮಾಡಬೇಕು ಎಂದು ಕರವೇ ಅಗ್ರಹಿಸಿದೆ.
ವಿವಾದಿತ ಚಿತ್ರ ಬಿಡುಗಡೆ ಆಗುತ್ತಿದ್ದಂತೆ ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಮರಾಠಿ ಚಲನಚಿತ್ರ 'ಬಾಯ್ಸ್ 03' ನಿಷೇಧಕ್ಕೆ ಆಗ್ರಹ ಕೇಳಿ ಬಂದಿದ್ದು. ಈ ಚಿತ್ರವನ್ನು ನಿಷೇಧ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರ ಮೂಲಕ ಸಿಎಮ್ ಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದಿಂದ ಮನವಿ ಮಾಡಿದ್ದಾರೆ.
PublicNext
16/09/2022 03:09 pm