ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಹತ್ತು ಸೇತುವೆಗಳ ಪೈಕಿ ಏಳು ಸೇತುವೆಗಳು ಸಂಚಾರಕ್ಕೆ ಮುಕ್ತ

ಚಿಕ್ಕೋಡಿ : ಚಿಕ್ಕೋಡಿ ಉಪವಿಭಾಗದಲ್ಲಿ ಹಾಗೂ ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಹತ್ತು ಸೇತುವೆಗಳ ಪೈಕಿ ಏಳು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ವೇದಗಂಗಾ ನದಿಗೆ ಅಡ್ಡಲಾಗಿರುವ ಭೋಜ - ಹುನ್ನರಗಿ, ಭೋಜಬಾಡಿ - ಕೊನ್ನೂರ, ಸಿದ್ನಾಳ - ಅಕೋಳ ಮತ್ತು ಭೀಮಸಿ - ಜತ್ರಾಟ ಹಾಗೂ ದೂದ್ ಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ - ಭೋಜ, ಯಕ್ಸಂಬಾ - ದನವಾಡ, ಸದಲಗಾ - ಬೋರಗಾಂವ, ಸಂಚಾರಕ್ಕೆ ಮುಕ್ತಗೊಂಡಿವೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ - ಯಡೂರ, ದೂದ್ ಗಂಗಾ ನದಿಗೆ ಅಡ್ಡಲಾಗಿರುವ ದತ್ತವಾಡ - ಮಲಿಕವಾಡ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿರುವ ಮಮದಾಪೂರ - ಹುನ್ನರಗಿ, ಕುನ್ನೂರ - ಬಾರವಾಡ ಸಂಚಾರ ಬಂದ್ ಆಗಿವೆ.

ಸದ್ಯ ಕೊಯ್ನಾ ಜಲಾಶಯದಿಂದ 42,331ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ದೂದ್ ಗಂಗಾ ನದಿಯಿಂದ 12,672 ಹಾಗೂ ರಾಜಾಪೂರ ಬ್ಯಾರೇಜ್‌ನಿಂದ 79,750 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

Edited By : Somashekar
Kshetra Samachara

Kshetra Samachara

20/09/2022 03:36 pm

Cinque Terre

12.84 K

Cinque Terre

0

ಸಂಬಂಧಿತ ಸುದ್ದಿ