ಚಿಕ್ಕೋಡಿ:ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ 2ಎ ಮೀಸಲಾತಿ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಪಂಚಮಸಾಲಿಗರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಪಂಚಮಸಾಲಿಯ ಸಮುದಾಯದವರು ಟೈರ್'ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆಯನ್ನು ಸಲ್ಲಿಸಿ, ಹೋರಾಟಕ್ಕೆ ಚಾಲನೆ ನೀಡಲಾಯಿತು. ಯಡೂರ ಗ್ರಾಮದಲ್ಲಿನ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದರು. ಬಳಿಕ ಪ್ರತಿಭಟನೆ ಕಾವು ಹೆಚ್ಚಾಗುತ್ತದಂತೆ ಟೈರ್'ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಬಳಿಕ ಪಂಚಮಸಾಲಿ ಸಮಾಜದ ಮುಖಂಡರಾದ ತೇಜಗೌಡ ಪಾಟೀಲ ಮಾತನಾಡಿ 2 ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡಿದೆ. ಅದಲ್ಲದೇ ನಮ್ಮ ಸಮಾಜದ ಬಾಂಧವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವುದನ್ನು ನಾವು ತೀವ್ರವಾಗಿ ಖಂಡಿಸ್ತೇವೆ ಎಂದರು.
ಬಳಿಕ ವೀರಗೌಡ ಪಾಟೀಲ ಮಾತನಾಡಿ ದುಷ್ಟ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮಾಜದ ಬಾಂಧವರ ಮೇಲೆ ದಬ್ಬಾಳಿಕೆ ಹಾಗೂ ಲಾಠಿಚಾರ್ಜ್ ಮಾಡಿರುವುದು ನಿಜಕ್ಕೂ ಸರ್ಕಾರಕ್ಕೆ ಶೋಭೆ ತರುವುದಿಲ್ಲ, ಕೂಡಲೇ ಸರ್ಕಾರ ಸಮಾಜದ ಬಾಂಧವರ ಮೇಲೆ ಹಾಕಿರುವಂತಹ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ರಾಜ್ಯ ಸರ್ಕಾರ ವಿರುದ್ಧ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಅಮಿತ ಪಾಟೀಲ,ಸುರೇಶ ಕಾಗವಾಡೆ,ಡಾ.ಜಿನೇಂದ್ರ ಉಗಾರೆ,ಸಚಿನ್ ಪಾಟೀಲ, ಸಂತೋಷ ಪಾಟೀಲ, ಮಹೇಶ ಬೆಳವಿ,ಭಿಮಗೌಡ ಪಾಟೀಲ, ಅನೀಲ ವಾಳಕೆ,ಸಂತೋಷ ಹಕಾರೆ,ಅಮೀತ ಫುಠಾಣೆ, ಗಣಪತಿ ಉಗಾರೆ,ಪ್ರಮೋದ ಮಠಕರ, ಗಜರಾಜ ಕರೋಶಿ,ಪೋಪಟ ಕರೋಶಿ,ಶ್ರೀಶೈಲ್ ಕೊಠಿವಾಲೆ,ಪರೂ ಪಾಟೀಲ,ಬಸವರಾಜ ಹುನ್ನೂರ,ಲಕ್ಕನಗೌಡ ಪಾಟೀಲ, ಕುಮಾರ ಪಾಟೀಲ,ವಿಶ್ವನಾಥ ಪಾಟೀಲ ಸೇರಿದಂತೆ ಯಡೂರ ಗ್ರಾಮದ ಪಂಚಸಾಲಿ ಸಮಾಜದ ಬಾಂಧವರು ಉಪಸ್ಥಿತರಿದ್ದರು..
Kshetra Samachara
12/12/2024 12:58 pm