ಬೈಲಹೊಂಗಲ : ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಪಾರಂಪರಿಕ ವೈಧ್ಯಕೀಯ ಸೇವೆಗಳ ಮೂಲಕ ಸಮಾಜದ ಉದ್ಧಾರದಲ್ಲಿ ವಿಜಯಾನಂದ ಶ್ರೀಗಳ ಪಾತ್ರ ಅನನ್ಯವಾಗಿದ್ದು ಅವರು ಮಾಡುವ ಕಾರ್ಯಗಳಿಗೆ ಭಕ್ತರು ಶಕ್ತಿ ತುಂಬಲಿ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಬೇವಿನಕೊಪ್ಪ ಗ್ರಾಮದ ಭಗವಾನ ನಿತ್ಯಾನಂದ ಆನಂದಾಶ್ರಮದಲ್ಲಿ ಶುಕ್ರವಾರ ಜರುಗಿದ ವಿಜಯಾನಂದ ಶ್ರೀಗಳ 75 ನೇ ವರ್ಷದ ವಜ್ರ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಒಬ್ಬ ಸನ್ಯಾಸಿ ಮಾನವ ಕುಲವನ್ನು ಉದ್ಧಾರ ಮಾಡಬೇಕೆಂದು ಹಠ ತೊಟ್ಟರೆ ಆ ಭಾಗವೇ ಪುಣ್ಯಮಯವಾಗಿ ಜನರು ಸುಖ: ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ವೀರ ಶೂರರ ಈ ನಾಡಿನ ಬೇವಿನಕೊಪ್ಪ ಪರಿಸರದಲ್ಲಿ ಅವಧೂತ ಶ್ರೀಗಳು ಪರಮಾತ್ಮನೇ ಮೆಚ್ಚುವಂತಹ ಅಗಾಧ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
Kshetra Samachara
24/01/2025 07:23 pm