ಬೆಂಗಳೂರು: ಕಿಕ್ ಬಾಕ್ಸಿಂಗ್ ಪಂದ್ಯದ ವೇಳೆ ಎದುರಾಳಿ ಸ್ಪರ್ಧಿ ನೀಡಿದ ಪಂಚ್‌ಗೆ ರಿಂಗ್‌ನಲ್ಲೇ ಮೈಸೂರು ಮೂಲದ ಕಿಕ್ ಬಾಕ್ಸರ್ ದುರಂತ ಅಂತ್ಯ ಕಂಡಿದ್ದಾನೆ.
ನಿಖಿಲ್ ಎಂಬಾತರೇ ಮೃತಪಟ್ಟ ಕಿಕ್ ಬಾಕ್ಸರ್. ಮೈಸೂರು ಮೂಲದ ನಿಖಿಲ್ ಕಳೆದ ಭಾನುವಾರ ನಾಗರಭಾವಿಯ ರಾಪಿಡ್ ಫಿಟ್ನೆಸ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ. ರಿಂಗ್‌ನಲ್ಲಿ ಆಟವಾಡುವ ವೇಳೆ ಎದುರಾಳಿ ಸ್ಪರ್ಧಿ ನೀಡಿದ ಪಂಚ್‌ಗೆ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಕುಸಿದುಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಖಿಲ್ ಮೃತಪಟ್ಟಿದ್ದಾರೆ.
ಆಯೋಜಕ ನವೀನ್ ರವಿಶಂಕರ್ ನಿರ್ಲಕ್ಕ್ಷ್ಯದಿಂದ ನಿಖಿಲ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಸ್ಪರ್ಧೆ ಆಯೋಜನೆ ವೇಳೆ ಸ್ಥಳದಲ್ಲಿ ವೈದ್ಯರು, ಆಂಬುಲೆನ್ಸ್ ಸೇರಿ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಸದ್ಯ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿದ್ದು ರವಿಶಂಕರ್ ತಲೆಮರೆಸಿಕೊಂಡಿದ್ದಾನೆ.
PublicNext
14/07/2022 01:35 pm