ಬೆಂಗಳೂರು: ಆರ್ಡರ್ ಮಾಡಿದ್ದು ಪನ್ನೀರ್... ಡೆಲಿವರಿ ಆಗಿದ್ದು ಮಾತ್ರ ಚಿಕನ್ ಬಿರಿಯಾನಿ ಅನ್ನೋ ಹಾಗೆ ಕಾಣಿಸ್ತಾ ಇದೆ. ಶಶ್ ಅನ್ನೋ X ಬಳಕೆದಾರರೊಬ್ಬರು ಜೋಮೆಟೋಗೆ ಟ್ಯಾಗ್ ಮಾಡಿ ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ ಸಮುದಾಯದವರಾಗಿದ್ದ ಶಶ್‌ಗೆ ಊಟದಲ್ಲಿ ಚಿಕನ್ ಪೀಸ್ ಸಿಕ್ಕಿದೆ ಅಂತ ಕಂಪ್ಲೇಂಟ್ ಮಾಡಲಾಗಿದೆ. ವೈರಲ್ ಫೀವರ್ ಅಂತ ಶೇಖ್ ಆಗುತ್ತಿದ್ದ ವ್ಯಕ್ತಿ ಜೋಮೆಟೋ ಮೊರೆ ಹೋಗ್ತಾರೆ. ಟ್ಯಾಬ್ಲೆಟ್ ತಗೋಬೇಕು ಅಂತ ಮಿಡ್ ನೈಟ್‌ನಲ್ಲಿ ಪನ್ನೀರ್ ಆರ್ಡರ್ ಮಾಡಿದ ವ್ಯಕ್ತಿಗೆ ಪನ್ನೀರ್ ಬಿರಿಯಾನಿ ಅಲ್ಲಿ ಚಿಕನ್ ಪೀಸ್ ಸಿಗುತ್ತಂತೆ. ಮೂಲತಃ ಲಿಂಗಾಯತ ಆಗಿದ್ದ ವ್ಯಕ್ತಿ ಚಿಕನ್ ಪೀಸ್ ನೋಡಿ ಶಾಕ್ ಆಗಿದ್ದು ಜೋಮೆಟೋ ವಿರುದ್ಧ ಪೋಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
15/12/2024 11:13 am