ಆನೇಕಲ್: ಬಿಬಿಎಂಪಿ ಕಸ ವಿಲೇವಾರಿ ಘಟಕದ ಅವ್ಯವಸ್ಥೆ ವಿರುದ್ಧ ಅಪಾರ್ಟ್ಮೆಂಟ್ ನಿವಾಸಿಗಳು, ಊರಿನ ನಿವಾಸಿಗಳು ಪ್ರತಿಭಟನೆಗೆ ನಡೆಸಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಂತೆ ಆಗ್ರಹಿಸಿ, ಚಿಕ್ಕನಾಗಮಂಗಲದ ಕಸ ಸಂಸ್ಕಾರನ ಘಟಕದ ಮುಂದೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿನ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹುಸ್ಕೂರು ಸಮೀಪದ ಚಿಕ್ಕ ನಾಗಮಂಗಲ, ಬಿಬಿಎಂಪಿ ಘನ ತ್ಯಾಜ್ಯ ಸಂಸ್ಕರಣ ಘಟಕದ ನೀರು ಕೆರೆಗೆ ಬಿಟ್ಟ ಪರಿಣಾಮ ಸಂಪೂರ್ಣ ಕಲುಷಿತ ಮತ್ತು ವಿಷಯಕ್ಕೆ ಆಗಿದೆ. ಹೀಗಾಗಿ ಅಧಿಕಾರಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಊರಿನ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೇ ಕಸ ಸಂಸ್ಕರಣ ಘಟಕದಿಂದ ಚಿಕ್ಕನಾಗಮಂಗಳ ಸುತ್ತಮುತ್ತ ಗಬ್ಬುನಾರ್ತಿದೆ ಮೂಗು ಮುಚ್ಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಅಲ್ದೆ ಅಪಾರ್ಟ್ಮೆಂಟ್ ಮುಖೇನ ದೂರು ಸಲ್ಲಿಕೆ ಮಾಡಿದ್ದೇವೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ತಿಳಿಸಿದರು. ಮತ್ತೊಬ್ಬ ಪ್ರತಿಭಟನೆಕಾರ ಮಾತನಾಡಿ ಪ್ರಮುಖವಾಗಿ ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರು ಬೇಡಿಕೆಗಳನ್ನು ಬಿಬಿಎಂಪಿ ಅಧಿಕಾರಿಗಳ ಮೂಲಕ ಪತ್ರವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಜಂಟಿ ಆಯುಕ್ತ ಪರಶುರಾಮ್ ಮಾತನಾಡಿ ನಮಗೆ ಘನತಾಜ್ಯ ಸಮಸ್ಯೆ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವುದೇ ಕಾರಣಕ್ಕೂ ಮಳೆ ಬಂದಾಗ ಕಸ ವ್ಯಾಜ್ಯ ನೀರು ಗುಂಡಿ ಸೇರುತ್ತಿಲ್ಲ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಈಗ ಏನು ಬೇಡಿಕೆ ಇಟ್ಟಿದ್ದಾರೆ ಆ ಸಮಸ್ಯೆಗಳ ಆದಷ್ಟು ಬೇಗ ಪರಿಹಾರ ಮಾಡ್ತೀವಿ ಅಂತ ತಿಳಿಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು..
Kshetra Samachara
17/08/2022 08:43 pm