ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಸಿಎಂ ಬೊಮ್ಮಾಯಿ ಜಾಹೀರಾತು

ಬೆಂಗಳೂರು: ಸಿಎಂ ಬೊಮ್ಮಾಯಿ ನೀಡಿರುವ ಜಾಹೀರಾತು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.ಹರ್ ಘರ್ ತಿರಂಗಾ ಜಾಹೀರಾತಿನಲ್ಲಿ ಮೊದಲು ಪ್ರಧಾನಿ ನೆಹರೂ ಭಾವಚಿತ್ರ ಮಿಸ್ ಆಗಿತ್ತು.

ನಂತರ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ ಪ್ರಕಟಿಸುವಾಗ ನೆಹರೂ ಫೋಟೋ ಮಿಸ್ ಆಗಿತ್ತು.ಈಗ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಹಾಕದೆಯೇ ಜಾಹೀರಾತು ಪ್ರಕಟಿಸಲಾಗಿದೆ.ವಿವಿಧ ಪತ್ರಿಕೆಗಳ ಜಾಹೀರಾತಿನಲ್ಲಿ ನೆಹರೂ ಫೋಟೋ ಮಿಸ್ ಆಗಿರುವ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ.

ಇನ್ನೂ ಸಿಎಂ ಜಾಹೀರಾತಿಗೆ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಕಿಡಿಕಾರಿದ್ದಾರೆ.ಸಿಎಂ ಬೊಮ್ಮಾಯಿ ತಮ್ಮ ಕೆಲಸ ಉಳಿಸಿಕೊಳ್ಳಲು ಹತಾಶರಾದಂತೆ ಕಾಣುತ್ತಿದೆ.ನೆಹರೂ ಫೋಟೋ ಮರೆತಿರುವುದು ಬೊಮ್ಮಾಯಿಯವರ ತಂದೆ ಎಸ್ ಆರ್ ಬೊಮ್ಮಾಯಿಯವರಿಗೆ ಅವಮಾನ.ಎಸ್ ಆರ್ ಬೊಮ್ಮಾಯಿಯವರ ರಾಜಕೀಯ ಗುರು ಎಂಎನ್ ರಾಯ್ ಇವರಿಬ್ಬರೂ ನೆಹರೂರವರ ಬೆಂಬಲಿಗರಾಗಿದ್ದರು.ಇಂತಹ ನೆಹರೂರವರನ್ನು ಸಿಎಂ ಮರೆತಿರುವುದು ಕರುಣಾಜನಕ ಎಂದು ಅಸಾಮಾಧಾನ ವ್ಯಕ್ತಪಡಿಸಿದಾರೆ.

Edited By : Nirmala Aralikatti
PublicNext

PublicNext

14/08/2022 11:52 am

Cinque Terre

25.82 K

Cinque Terre

3

ಸಂಬಂಧಿತ ಸುದ್ದಿ