ಬೆಂಗಳೂರು: 2023ರ ಚುನಾವಣೆಯಲ್ಲಿ ದಾಸರಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಲಕ್ಷ್ಮೀ ಪೂಜೆ ನೆರೆವೇರಿಸಿದ್ದು, 2 ಸಾವಿರದ ಒಂದು (2001) ಮಹಿಳೆಯರು ಲಕ್ಷ್ಮೀ ಪೂಜೆ ನೆರವೇರಿಸಿದರು
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲೆಮಹೇಶ್ವರಮ್ಮ ದೇವಾಲಯ ಆವರಣದಲ್ಲಿ ಸಾಮೂಹಿಕ ಲಕ್ಷ್ಮೀ ಪೂಜೆ ನೆಡೆದಿದ್ದು, ಕಾಂಗ್ರೆಸ್ ಮುಖಂಡರಾದ ಗೀತಾ ಶಿವರಾಂ ಅವರು ಲಕ್ಷ್ಮೀ ಬೆಳ್ಳಿ ಪೋಟೋ, ಪೂಜಾ ಸಾಮಗ್ರಿಗಳ ವಿತರಣೆ ಮಾಡಿ ಆಷಾಡ ಮಾಸದ ಲಕ್ಷ್ಮೀ ಪೂಜೆ ಮುಖಾಂತರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜೆಡಿಎಸ್, ಬಿಜೆಪಿ ಗುದ್ದಾಟದಲ್ಲಿ ಗೆಲುವು ಸಾಧಿಸಲು ಪ್ಲಾನ್ ಎಂಬಂತೆ ಮೊದಲ ಹೆಜ್ಜೆಯಾಗಿ ಕ್ಷೇತ್ರದಲ್ಲಿ ಬೃಹತ್ ಆಷಾಡ ಮಾಸದ ಲಕ್ಷ್ಮೀ ಪೂಜೆ ಅಯೋಜನೆ ಮಾಡಿದ್ದು, ಪೂಜೆಯಲ್ಲಿ ಗೀತಾ ಶಿವರಾಂ ಜೊತೆಗೆ ಸ್ಥಳೀಯ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್,ರಾಮಲಿಂಗ ರೆಡ್ಡಿ ಅವರ ಭಾವಚಿತ್ರದ ಪ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಾಗಲಗುಂಟೆ ಪೊಲೀಸ್ರು ನಿಗಾವಹಿಸಿದ್ದರು.
PublicNext
15/07/2022 07:02 pm