ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿನತ್ತ ತೆರಳಿದರು.
ದೆಹಲಿಯಿಂದ ಸಂಜೆ 6ಕ್ಕೆ ಆಗಮಿಸಿದ ಅರುಣ್ ಸಿಂಗ್ ರನ್ನು ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.
ನಾಳೆ ಜೆ.ಪಿ. ನಡ್ಡಾ ರಾಜ್ಯಕ್ಕೆ ಬರುತ್ತಿರುವ ಒಂದು ದಿನ ಮುಂಚಿತವಾಗಿ ಅರುಣ್ ಸಿಂಗ್ ಆಗಮನ ಕುತೂಹಲ ಕೆರಳಿಸಿದೆ. ರಾಜ್ಯ ಬಿಜೆಪಿ ಪಕ್ಷದ ಬೆಳವಣಿಗೆಗಳು, ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದಷ್ಟು ಚರ್ಚೆಯಾಗಲಿವೆ ಎಂಬ ವಿಷಯ ಸ್ಪಷ್ಟವಾಗಿದೆ.
- ಸುರೇಶ್ ಬಾಬು Public Next ದೇವನಹಳ್ಳಿ
PublicNext
17/06/2022 07:56 pm