ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ ಬೃಹತ್ ವೇದಿಕೆ

ಬೆಂಗಳೂರು: ಯಶವಂತಪುರ ವಿಧಾನಸಭೆ ಕ್ಷೇತ್ರದ ಉಲ್ಲಾಳ್ ವಾರ್ಡ್ ನ ವಿಶ್ವೇಶ್ವರಯ್ಯ ಬಡಾವಣೆ ಗ್ರೌಂಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ‌ ಆಯೋಜಿಸಲಾಗಿದೆ.‌ ಜೂನ್ 20ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.‌

ಈ ಗ್ರೌಂಡ್ ಬರೋಬ್ಬರಿ 15 ಎಕರೆ ವಿಸ್ತೀರ್ಣದಿಂದ ಕೂಡಿದ್ದು, 50 ಸಾವಿರಕಿಂತ ಹೆಚ್ಚು ಜನರು ಪಾಲ್ಗೊಳಲಿದ್ದಾರೆ. ಅದಕ್ಕೆ ತಕ್ಕಂತೆ ಸ್ಥಳವನ್ನು ಸಜ್ಜುಗೊಳಿಸಲಾಗುತ್ತಿದೆ. ಇನ್ನು, ಉಲ್ಲಾಳ್ ವಾರ್ಡ್ ನ ಸ್ಯಾಟಲೈಟ್ ಕ್ಲಬ್ ಹಿಂಭಾಗದ 5 ಎಕರೆ ಜಾಗದಲ್ಲಿ 3 ಹೆಲಿಪ್ಯಾಡ್ ನಿರ್ಮಾಣವಾಗ್ತಿದೆ.

ಒಂದು ವಾರದಿಂದ ಸತತವಾಗಿ ಸಾವಿರಾರು ಕಾರ್ಮಿಕರು ಕಾಮಗಾರಿಯಲ್ಲಿ ನಿರತರಾಗಿದ್ಧು, ಜರ್ಮನ್ ಮಾದರಿಯ ಟೆಂಟ್ ನಿರ್ಮಾಣದಲ್ಲಿ ತೊಡಗಿದ್ದಾರೆ. ಮಳೆಗಾಲ ಆಗಿರೋದ್ರಿಂದ ಮುಂಜಾಗ್ರತೆಗಾಗಿ ಈ ಟೆಂಟ್ ನಿರ್ಮಿಸಲಾಗುತ್ತಿದೆ. ಪ್ರಧಾನಿಯವರು ಬರಲಿರುವ ರಸ್ತೆಗೆ ಟಾರ್ ಹಾಕಿ ಬಣ್ಣ ಬಳಿಯಲಾಗಿದೆ ಎಂದು ಡಿ.ಸಿ. ಮಂಜುನಾಥ್ ʼಪಬ್ಲಿಕ್ ನೆಕ್ಸ್ಟ್ʼ ಗೆ ತಿಳಿಸಿದ್ದಾರೆ.

- ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By :
PublicNext

PublicNext

15/06/2022 09:16 pm

Cinque Terre

39.98 K

Cinque Terre

1

ಸಂಬಂಧಿತ ಸುದ್ದಿ