ಬೆಂಗಳೂರು ದಕ್ಷಿಣ: ಬೆಂಗಳೂರು: ಅವನ್ಯಾವನೋ ಪೋಲಿಸ್ ಇನ್ಸ್‌ಪೆಕ್ಟರ್ ಅಂತೆ. ಅಂತ ಬಚ್ಚ ಇನ್ಸ್‌ಪೆಕ್ಟರ್‌ನ ಎಷ್ಟು ಜನ ನೋಡಿಲ್ಲ. ನನ್ನ ರಾಜಕೀಯ ವಯಸ್ಸು ಅವನಿಗೆ ಅಗಿಲ್ಲ. ನಾನಿನ್ನೂ ಮೂರನೇ ಕಣ್ಣು ಬಿಟ್ಟಿಲ್ಲ ಅವನಿಗೆ ಬಿಟ್ಟರೆ ಬಳ್ಳಾರಿ, ರಾಯಚೂರು, ಗುಲ್ಬರ್ಗ. ನನ್ನತ್ರ ರೌಡಿಸಂ ನಡೆಯಲ್ಲ. ನಾನು ಇದೆಲ್ಲವನ್ನೂ ಆಡಿದ ನಂತರವೇ ಎಂಎಲ್ಎ ಆಗಿ ಬಂದಿರೋದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಬಹಿರಂಗ ಸಭೆಯಲ್ಲಿ ಎಂ ಕೃಷ್ಣಪ್ಪ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಶಿಕಾರಿಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ಊರುಗಳಿಗೆ ಹೋಗಲು ಬಸ್ ಇಲ್ಲದ ಸಮಯದಲ್ಲಿ ಬಿಎಂಟಿಸಿ ಬಸ್ ಒದಗಿಸಿ ತುಂಬ ಜನಕ್ಕೆ ಉಪಯೋಗ ಮಾಡಿಕೊಟ್ಟಿದ್ದೇನೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಟ್ಟು ಐದು ರೂಪಾಯಿ ಕೆಲಸ ಮಾಡಿಲ್ಲ. ಮನೆಯಲ್ಲಿ ಇರುವವರೆಲ್ಲ ಮಾತಾಡಕ್ಕೆ. ಆದರೆ, ನಾನು ಬೀದಿಲಿ ಇರೋನು. ಬೆಳಗ್ಗೆ ಎದ್ದರೆ ನನಗೆ ಕಾಂಪೌಂಡ್ ಇಲ್ಲ ತಕರಾರಿಲ್ಲ. ಮೂರನೇ ಕಣ್ಣು ಏನಾದ್ರೂ ಬಿಟ್ಟರೆ ಪ್ರತಿದಿನ ಕೋರ್ಟು-ಕಚೇರಿ ಅಂತ ಮೆಟ್ಟಲು ಹತ್ತಬೇಕು. ಅಷ್ಟು ಸುಲಭ ಅನ್ಕೋಬೇಡಿ ನನ್ನನ್ನ ತೊಡೆತಟ್ಟಿದವನಿಗೆ ತೊಡೆಮುರಿಯೋದಕ್ಕೆ ನಿದ್ದೆ ಬರೋದಿಲ್ಲ ನನಗೆ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಎಂ, ಕೃಷ್ಣಪ್ಪ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಗುಡುಗಿದ್ದಾರೆ.
PublicNext
05/06/2022 07:53 pm