ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಭುಸ್ ಭುಸ್ ಹಾವಳಿ : 26 ಜಾತಿ ಹಾವುಗಳು ಪತ್ತೆ

ಬೆಂಗಳೂರು : ಬಿಸಿಲಿನ ಬೇಗೆಯಿಂದ ಸಿಲಿಕಾನ್ ಸಿಟಿಯ ಅನೇಕ ಬಡಾವಣೆಗಳಲ್ಲಿ ಉರುಗಗಳ ಕಾಟ ಹೆಚ್ಚಾಗಿದ್ದುಸಾರ್ವಜನಿಕರೇ ಎಚ್ಚರದಿಂದಿರಿ.

ಹೌದು ನಗರದಲ್ಲಿ ಹಾವುಗಳ ಸಂಖ್ಯೆ ಹೆಚ್ಚಿದ್ದು, ಎಲ್ಲೆಂದರಲ್ಲಿ ಪತ್ತೆಯಾಗುತ್ತಿವೆ. ನಿಮ್ಮ ಮನೆಯಲ್ಲಿ ಸುರಕ್ಷಿತ ಸ್ಥಳಗಳನ್ನು ಹುಡುಕಲು ಹಾವುಗಳು ಹವಣಿಸುತ್ತಿವೆ.

ಹೌದು ಬೇಸಿಗೆಯ ಕಾರಣ ಹಾವುಗಳು ನಿಮ್ಮ ಮನೆಯಲ್ಲಿ ಸುರಕ್ಷಿತ ಸ್ಥಳವನ್ನು ಹುಡುಕಲು ಹವಣಿಸುತ್ತಿವೆ. ಈಗಾಗಲೇ ನಗರದಲ್ಲಿ 26 ಜಾತಿಯ ಹಾವುಗಳು ಪತ್ತೆಯಾಗಿದ್ದು, ಅದರಲ್ಲಿ 4 ಜಾತಿಯ ಹಾವುಗಳು ಮಾತ್ರ ವಿಷಕಾರಿಯಾಗಿವೆ.

ವಿಷಕಾರಿ ಹಾವು

1.ಕೋಬ್ರಾ

2.ರುಸ್ಸೇಲ್ಸ್ ವೈಪರ್

3.ಕತಹೂ

4.ಉರಿ ಮಂಡ್ಲಾ

ಈ ಹಾವು ನಗರದಲ್ಲಿ ಕಂಡುಬಂದಿವೆ ಮಾತ್ರವಲ್ಲದೆ ಈ ಹಾವುಗಳು ಮಾತ್ರ ವಿಷಕಾರಿಯಾಗಿವೆ. 8 ವಲಯಗಳಲ್ಲಿ bbmp ವನ್ಯಜೀವಿ ಇಲಾಖೆಗೆ ಪ್ರತಿದಿನ 20 ರಿಂದ 25 ಕರೆಗಳು ಬರುತ್ತಿವೆ.

ಒಟ್ಟಾರೆಯಲ್ಲಿ ಬೇಸಿಗೆಯಲ್ಲಿ ಜಾಗರೂಕರಾಗಿರಿ ಮತ್ತು ನಿಮ್ಮ ಮನೆಯಲ್ಲಿ ಹಾವು ಕಂಡುಬಂದರೆ ತಕ್ಷಣವೇ bbmp ಗೆ ಕರೆ ಮಾಡಲು ಮರೆಯದಿರಿ.

-ನವೀನ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Shivu K
PublicNext

PublicNext

18/04/2022 10:14 am

Cinque Terre

52.84 K

Cinque Terre

0

ಸಂಬಂಧಿತ ಸುದ್ದಿ