ಬೆಂಗಳೂರು: ಸಿಎಂ ದೆಹಲಿ ಪ್ರವಾಸ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಏಪ್ರಿಲ್ 5 ರಂದು
ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ಎರಡು ದಿನಗಳ ಅಧಿಕೃತ ದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಗರಿಗೆದರಿದೆ.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಹಾಗೂ ಇತರ ಅಭಿವೃದ್ಧಿಕಾರ್ಯಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳುತ್ತಿರುವುದಾಗಿ ಸಿಎಂ ಅವರು ಹೇಳಿದ್ದಾರಾದರೂ ಅವರು ಅದಕ್ಕಿಂತ ಅದ್ಯಾವುದೂ ಅಷ್ಟರ ಮಟ್ಟಿಗೆ ಚರ್ಚೆಗೆ ಬರುವ ವಿಚಾರಗಳಲ್ಲ. ಎಲ್ಲರ ಗಮನ ಕುತೂಹಲ ಎಲ್ಲವೂ ಕೇಂದ್ರೀಕೃತವಾಗಿರುವುದು ಸಚಿವ ಸಂಪುಟ ವಿಸ್ತರಣೆಯ ಕುರಿತಾಗಿಯೇ ಇದೆ.
ಈಗಾಗಲೇ 4 ಸ್ಥಾನ ಖಾಲಿ ಇದ್ದು ಅದನ್ನು ಭರ್ತಿ ಮಾಡಬೇಕಾಗಿದೆ. ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ. ಅದರಲ್ಲೂ ಈಗಿರುವ ಅನೇಕ ಹಿರಿಯ ಸಚಿವರನ್ನು ಕೈಬಿಟ್ಟು ಈಗಾಗಲೇ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಆಕಾಂಕ್ಷಿಗಳಿಗೆ ಅವಕಾಶವೊದಗಿಸಲಾಗುತ್ತದೆ ಎನ್ನುವ ಮಾತೂ ಚಾಲ್ತಿಯಲ್ಲಿರುವ ಕಾರಣ, ಅನೇಕ ಸಚಿವರಲ್ಲಿ ಆತಂಕ ಮನೆ ಮಾಡಿದೆ.
ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವುದರಿಂದ ಬಹಳ Effective ಆಗಿ ಕೆಲಸ ಮಾಡುವ ಹೊಸ ಮುಖಗಳಿಗೆ ಹಾಗೂ ಹಿಂದೆ ಅವಕಾಶ ತಪ್ಪಿದವರಿಗೆ ಮಣೆ ಹಾಕಲಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ಅನೇಕರಲ್ಲಿ ಆತಂಕ ಶುರುವಾಗಿದೆ. ಹಾಗಾಗಿ ಅನೇಕ ಆಕಾಂಕ್ಷಿಗಳು, ಸಚಿವರುಗಳು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಕುತೂಹಲಗಳಿಗೂ ತೆರೆ ಬೀಳಲಿದೆ.
ಪ್ರವೀಣ್ ಕುಮಾರ ರಾವ್ ಪೊಲಿಟಿಲ್ ಬ್ಯೂರೋ ಬೆಂಗಳೂರು
PublicNext
05/04/2022 10:33 pm