ಬೆಂಗಳೂರು: ಹಿಜಾಬ್ ಕುರಿತಂತೆ ಸರ್ಕಾರದ ನಿಲುವನ್ನ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿತ್ತು. ಯಾರೋ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದರು. ಸದ್ಯ ಹೈಕೋರ್ಟ್ ಉತ್ತಮ ತೀರ್ಪು ನೀಡಿದೆ ಎಂದು ಸಚಿವ ಸುನಿಲ್‌ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೈಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಶಾಲೆಗಳಲ್ಲಿ ಹಿಜಾಬ್ ಧರಿಸದಂತೆ ಪಕ್ಷ ಮತ್ತು ಸರ್ಕಾರ ಹೇಳಿಕೊಂಡೇ ಬಂದಿದೆ. ಧಾರ್ಮಿಕ ಚಟುವಟಿಕೆ, ಸಂಹಿತೆ ಶಾಲೆ ಹೊರಗೆ ಇರಲಿ ಅಂತ ಪ್ರತಿಪಾದನೆ ಮಾಡ್ತಾ ಬಂದಿದ್ದೆವು. ಕೆಲವರು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದರು. ಸದ್ಯ ನ್ಯಾಯಾಲಯವು ಈ ಬಗ್ಗೆ ಒಳ್ಳೆಯ ತೀರ್ಪು ನೀಡಿದೆ. ಶಾಲೆ ಕ್ಯಾಂಪಸ್‌ನಲ್ಲಿ ಮತ್ತಷ್ಟು ಮುಕ್ತವಾಗಿರಬೇಕು. ಶಿಕ್ಷಣ ಚಟುವಟಿಕೆ, ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡಲು ಸರ್ಕಾರ ಸಿದ್ಧವಿದೆ ಎಂದು ಸುನಿಲ್‌ಕುಮಾರ್ ಹೇಳಿದ್ದಾರೆ.
PublicNext
15/03/2022 12:25 pm