ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಐಟಿಐ ಕಾರ್ಮಿಕರ ಹೋರಾಟಕ್ಕೆ ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ಸಾಥ್

ಬೆಂಗಳೂರು: ಕೆಆರ್ ಪುರದಲ್ಲಿ ಇರುವ ಐಟಿಐ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಉದ್ಯೋಗ ನಿರಾಕರಿಸಿರುವುದನ್ನು ವಿರೋಧಿಸಿ ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆಯು 72 ದಿನಗಳು ತಲುಪಿದ್ದು, ಇಂದು ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಖ್ಯಾತ ಚಲನಚಿತ್ರ ನಟ ಮತ್ತು ಪ್ರಗತಿಪರ ಚಿಂತಕರಾದ ಚೇತನ್ ಸಾಥ್ ನೀಡಿದರು.

ಬಳಿಕ ಮಾತನಾಡಿದ ಅವರು ಅಂದು ಅಂಬೇಡ್ಕರ್, ಪೆರಿಯಾರ್, ಕುವೆಂಪು ರವರು ಮಾಡಿದ ಹೋರಾಟದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಐಟಿಐ ಲಿಮಿಟೆಡ್ ಕಾರ್ಮಿಕರು ಸಂಘಟನೆ ಮಾಡಿದ್ದರೆಂಬ ಏಕೈಕ ಕಾರಣಕ್ಕೆ ಕೆಲಸ ನಿರಾಕರಿಸಿರುವುದು ಬೇಸರದ ಸಂಗತಿ ಎಂದು ದೂರಿದರು.

ಐಟಿಐ ಖ್ಯಾತಿಯ ಹಿಂದೆ ಕಾರ್ಮಿಕರು ಶ್ರಮವಿದೆ ಎಂಬುದನ್ನು ಮರೆಯಬಾರದು. ಈ ಹೋರಾಟ ಮುಗಿಯುವವರೆಗೂ ಸಹಕಾರ ನೀಡುವುದಾಗಿ ಅವರು ತಿಳಿಸಿದರು...

Edited By : Shivu K
Kshetra Samachara

Kshetra Samachara

12/02/2022 11:26 am

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ