ದೇವನಹಳ್ಳಿ : ಗ್ರಾಮ ಪಂಚಾಯತಿ ಸಭೆಯಲ್ಲಿ ಸಾರ್ವಜನಿಕರು ಶಾಸಕರ ಮುಂದೆ ಸಮಸ್ಯೆಗಳ ಸುರಿಮಳೆಗೈದ ಘಟನೆ ನಡೆದಿದೆ. ಈ ವೇಳೆ ಸಮಸ್ಯೆಗಳನ್ನ ಕೇಳಿದ ಶಾಸಕರೇ ತಬ್ಬಿಬ್ಬಾಗಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯತಿಯ ಮೊದಲನೇ ಹಂತದ ಗ್ರಾಮ ಸಭೆಯಲ್ಲಿ ಈ ಘಟನೆ ನಡೆದಿದೆ.
ಸಭೆಯಲ್ಲಿ ಶಾಸಕರು ಸೇರಿದಂತೆ ಅಧಿಕಾರಿಗಳು ಸಹ ಭಾಗವಹಿಸಿದ್ದರು, ಈ ವೇಳೆ ಪಂಚಾಯತಿ ಸದಸ್ಯರು ಅಧ್ಯಕ್ಷರು ಸೇರಿದಂತೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್ಲಾ ಅಧಿಕಾರಿಗಳ ಮುಂದೆ ಸಾರ್ವಜನಿಕರ ಸಮಸ್ಯೆಗಳನ್ನು ಇಟ್ಟರು.
ಜನರ ಸಮಸ್ಯೆಗಳ ಕೇಳಿ ಧೃತಿಗೆಡದ ಶಾಸಕ ನಾರಾಯಣಸ್ವಾಮಿ ಜನರನ್ನು ಸಮಧಾನ ಪಡಿಸಿ ಸಮಸ್ಯೆಗಳನ್ನು ಏಕೆ ಬಗೆಹರಿಸಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಗರಂ ಆದ್ರು.
ಬಳಿಕ ಸ್ವತಂ ಏನೇ ಸಮಸ್ಯೆ ಇದ್ರೂ ನನಗೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
Kshetra Samachara
03/02/2022 07:10 pm