ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗುತ್ತೆ - ಸಿ‌.ಟಿ‌ ರವಿ

ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಪ್ರಕರಣ ಬಗ್ಗೆ ಮಾತನಾಡಿರುವ ಸಿ.ಟಿ.ರವಿ,

ಹಲವು ದಿನಗಳಿಂದ ಕಾಂಗ್ರೆಸ್ ಬಿಟ್ ಕಾಯಿನು ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ,ಅವರ ಬಳಿ ಆಧಾರ ಇದ್ರೆ ವಿಶ್ವಾಸ ತನಿಖಾ ದಳಕ್ಕೆ ಕೊಡಲಿ ಎಂದಿದ್ದಾರೆ.

ಶ್ರೀಕಿಯನ್ನು ಬಂಧನ ಮಾಡಿದ್ದು ಕಾಂಗ್ರೆಸ್, ವಿಚಾರಣೆ ಮಾಡಿದ್ದು ಬಿಜೆಪಿ‌ ಅದಕ್ಕೂ ಮೊದಲು ಮಲ್ಯ ಟವರ್ ನಲ್ಲಿ ಶ್ರೀಕಿ ಯಾರ ಜತೆ ಮಜಾ ಮಾಡ್ಕೊಂಡಿದ್ದ, ಯಾವ ಕಾಂಗ್ರೆಸ್ ನಾಯಕರ ಮಗನ ಜತೆ ಇದ್ದ ಅಂತ ಬಹಿರಂಗ ಪಡಿಸಲಿ ಎಂದು ಚಾಲೆಂಜ್ ಹಾಕಿದ್ದಾರೆ.

ಬಿಟ್ ಕಾಯಿನ್ ಪ್ರಕರಣದಲ್ಲಿ ಆಧಾರ ಬಹಿರಂಗಪಡಿಸಲು ಯಾರೂ ಕಾಂಗ್ರೆಸ್ ಬಾಯಿ ಕಟ್ಟಿ ಹಾಕಿಲ್ಲವಲ್ಲ, ಸರ್ಕಾರ ಯಾರನ್ನು ರಕ್ಷಿಸಿಲ್ಲ. ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗುತ್ತೆ.

ಈ ಪ್ರಕರಣದಲ್ಲಿ ಪಂಚೆ ಉಟ್ಕೊಂಡು ಬರ್ತಿದ್ದ ಮಾಜಿ ಮುಖ್ಯಮಂತ್ರಿ ಇದ್ದಾರೆ ಎಂದು ಆರೋಪ ಮಾಡಕ್ಕಾಗುತ್ತಾ? ಹಾಗೆ ಆರೋಪ ಮಾಡಿದ್ರೆ ಎಲ್ರೂ ಪಂಚೆ ಮುಟ್ಟಿ ಕೊಡಗುತ್ತಾರೆ, ನಾವು ಅವರ ಥರ ಗಾಳಿಯಲ್ಲಿ ಗುಂಡು ಹೊಡೆಯೋಕ್ಕಾಗುತ್ತಾ ಎಂದು

ಕಾಂಗ್ರೆಸ್ ಗೆ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

09/11/2021 01:05 pm

Cinque Terre

440

Cinque Terre

0

ಸಂಬಂಧಿತ ಸುದ್ದಿ