ಯಲಹಂಕ: ನಗರ ಪ್ರದೇಶಗಳಲ್ಲಿ ಮಲತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಈ ರೀತಿಯ ಸೌಲಭ್ಯ ಕಡಿಮೆ. ಆದ್ದರಿಂದ ಯಲಹಂಕ ಮತ್ತು ರಾಜಾನುಕುಂಟೆ ಸುತ್ತಮುತ್ತಲಿನ ಗ್ರಾಮಾಂತರ ಭಾಗಕ್ಕೆ ಈ ರೀತಿಯ ಘಟಕದ ಅವಶ್ಯಕತೆ ಇತ್ತು. ಆದ್ದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ, ಸರ್ಕಾರಿ ಜಾಗದಲ್ಲಿ ಮಲ ಸಂರಕ್ಷಣೆ ಘಟಕ ಕಾರ್ಯಾರಂಭವಾಗಿದೆ. ರಾಜಾನುಕುಂಟೆ ಗ್ರಾಮ ಪಂಚಾಯ್ತಿ ನಿರ್ವಹಣೆಯ ಘಟಕದ ಸೇವೆಯನ್ನು ಸುತ್ತಮುತ್ತಲ ಗ್ರಾಮಗಳ ಜನ ಪಡೆದುಕೊಳ್ಳಬಹುದು ಎಂದು ಯಲಹಂಕ ಶಾಸಕ ಎಸ್ಆರ್.ವಿಶ್ವನಾಥ್ ತಿಳಿಸಿದರು.
ಘಟಕದ ಉದ್ಘಾಟನೆಯನ್ನು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಡಿಎ ಅಧ್ಯಕ್ಷ ವಿಶ್ವನಾಥ್, ರಾಜಾನುಕುಂಟೆ ಗ್ರಾಮಪಂಚಾಯ್ತಿ ಸದಸ್ಯರು, ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
05/07/2022 11:18 am