ಪ್ರವೀಣ್ ರಾವ್...
ಬೆಂಗಳೂರು: ಇವತ್ತು ಬೆಳಗ್ಗಿನಿಂದ ರಾಜ್ಯಾದ್ಯಂತ ಬರೀ PayCm ದ್ದೇ ಸದ್ದು ಪೇಸಿಎಂ ದ್ದೇ ಸುದ್ದಿ... ಖಂಡಿತವಾಗಿಯೂ ಈ ರೀತಿಯ ಒಂದು ವ್ಯಂಗಭರಿತ ಪೋಸ್ಟರ್ ನ ಪ್ರಯೋಗ ಇಡೀ ದೇಶದಲ್ಲೇ ಮೊದಲು ಎನ್ನಬಹುದು..
ಇಂದು ಬೆಂಗಳೂರು ನಗರದಾದ್ಯಂತ ಒಂದು ಪೋಸ್ಟರ್ ಕಂಡು ಬಂತು. ಥೇಟು ಪೇಟಿಯಂ ಮಾದರಿಯ ಪೋಸ್ಟರ್ ನಲ್ಲಿ ಕ್ಯೂಆರ್ ಕೋಡ್ ಬಳಸಿ ಅದರಲ್ಲಿ ಸಿಎಂ ಬೊಮ್ಮಾಯಿಯವರನ್ನು ಕೂಡ್ರಿಸಿ ಪೇಸಿಎಂ ಎಂಬ ತಲೆಬರಹ ಕೊಡಲಾಗಿತ್ತು..
ಯಾರಾದ್ರೂ ಆ ಕೋಡ್ ಮೇಲೆ scan ಮಾಡಿದ್ರೆ ರಾಜ್ಯ ಬಿಜೆಪಿ ಸರ್ಕಾರದ ಮೇಲಿರುವ 40% ಆರೋಪದ ಸಮಗ್ರ ಡಿಟೇಲ್ಸ್ ಬರುವ ಹಾಗೆ ಪೋಸ್ಟರ್ ರೂಪಿಸಲಾಗಿತ್ತು..
ಈ ವಿಷಯ ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗುತ್ತಿರುವಂತೆಯೇ ಎಚ್ಚೆತ್ತ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲಾ ಪೋಸ್ಟರ್ ಗಳನ್ನು ತೆರವುಗೊಳಿಸಲು ಸೂಚನೆ ನೀಡಿತು.. ಆದರೂ ಸುಧಾರಿಸಿಕೊಳ್ಳಲಾರದಷ್ಟು Damage ಆಗಿಹೋಗಿತ್ತು....
PublicNext
21/09/2022 08:19 pm