'ಪಬ್ಲಿಕ್ ನೆಕ್ಸ್ಟ್' ಇಂಪ್ಯಾಕ್ಟ್
ಆನೇಕಲ್: ಆನೇಕಲ್ ಗಡಿ ಭಾಗದ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ನಗರದಲ್ಲಿ ಅಂಗನವಾಡಿಗೆ ಮಂಜೂರಾಗಿದ್ದ ಜಾಗವನ್ನು ಚುನಾಯಿತ ಪ್ರತಿನಿಧಿಗಳು ಕುಮ್ಮಕ್ಕಿನಿಂದ ಕಬಳಿಕೆ ಮಾಡಲು ಸಂಚು ರೂಪಿಸಿದ್ದಾರೆ ಅಂತ 'ಪಬ್ಲಿಕ್ ನೆಕ್ಸ್ಟ್' ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಸಮಂದೂರು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆ ಜಾಗದಲ್ಲಿ ಸರ್ಕಾರಿ ನಾಮಫಲಕವನ್ನು ಅಳವಡಿಸಿದೆ.
2005ರಲ್ಲಿ ಅಂಗನವಾಡಿಗೆ ಸಮಂದೂರು ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿತ್ತು. ಅಂಗನವಾಡಿಯ ಪಕ್ಕದ ಜಾಗ ಜಯಮ್ಮನವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಹಕ್ಕು ಪತ್ರವನ್ನು ನೀಡಲಾಗಿತ್ತು. ಆ ಜಾಗವನ್ನು ಜಯಮ್ಮನವರು ರಾಮಚಂದ್ರ ರೆಡ್ಡಿ ಎಂಬವರಿಗೆ ಮಾರಾಟ ಮಾಡಿದ್ದರು.
ಆದರೆ, ಈ ಜಾಗದ ಪಕ್ಕದಲ್ಲಿ ಇರುವ ಅಂಗನವಾಡಿ ಜಾಗವನ್ನು ಚುನಾಯಿತ ಪ್ರತಿನಿಧಿಗಳ ಕುಮ್ಮಕ್ಕಿನಿಂದ ಕಬಳಿಕೆ ಮಾಡಲು ಸಂಚು ರೂಪಿಸಿದ್ದರು. ಜೊತೆಗೆ ಆ ಜಾಗದ ಬದಲಾಗಿ ಬೇರೆ ಕಡೆ ಕೊಡಲು ಮುಂದಾಗಿದ್ದರು. ಹೀಗಾಗಿ ಊರಿನ ಗ್ರಾಮಸ್ಥರು ಬೇಡಿಕೆ ಮೇರೆಗೆ ಆ ಜಾಗವನ್ನು ಕಾಯ್ದಿರಿಸಿದ್ದಾರೆ. ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಆಗಿದೆ.
PublicNext
03/05/2022 04:51 pm