ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿರುವ ಆರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಿಂದ ವಂಚಿತರಾಗಿರುವವರು ಪರ್ಯಾಯ ನಿವೇಶನಕ್ಕಾಗಿ ಕಾಯುತ್ತಿರುವರ ಮಧ್ಯಯೇ ಪ್ರಾಧಿಕಾರ ಕೈಗೊಂಡಿರುವ ಮೂಲೆ ನಿವೇಶನ ಹರಾಜು ಪ್ರಕ್ರಿಯೆಗೆ ಬ್ರೇಕ್ ಹಾಕಲಾಗಿದೆ.
ಈ ಬಗ್ಗೆ ಹೈಕೋರ್ಟ್ ಕೂಡಾ ನಿರ್ದೇಶನ ನೀಡದ್ದು, ಮೂಲೆ ನಿವೇಶನ ಹರಾಜಿ ಪ್ರಕ್ರಿಯೆ ತಡೆ ಹಿಡಿಯಿರಿ. ಈ ಸಂಬಂಧ ಇದ್ದಂತ ವ್ಯಾಜ್ಯಗಳನ್ನು ಬಗೆಹರಿಸಿ ಕೊಳ್ಳುವಂತೆ ಬಿಡಿಎಗೆ ಸೂಚನೆ ನೀಡಿತ್ತು.
ಮೂಲೆ ನಿವೇಶನ ಖರೀದಿಗೆ ಹೊಸಬರನ್ನು ಹುಡುಕು ಬದಲು ವಂಚಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ಖಾಸಗಿ ರಿಯಲ್ ಎಷ್ಟೆಟು ಕಂಪನಿ ಎಂದು ಭಾವಿಸಿ ಕಾರ್ನರ್ ಸೈಟ್ ಹರಾಜು ಮಾಡುವ ಪ್ರಕ್ರಿಯೆ ಬಿಡಿಎ ನಿಲ್ಲಿಸ ಬೇಕೆಂದು ಕೋರ್ಟ್ ಹೇಳಿದೆ. ಆ ಹಿನ್ನೆಲೆಯಲ್ಲಿ ಪ್ರಾಧಿಕಾರ ನಡೆದುಕೊಳ್ಳಲು ಮುಂದಾಗಿದೆ.
Kshetra Samachara
20/06/2022 01:52 pm