ಬೆಂಗಳೂರು: ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವೆ ಸಂಪರ್ಕ ಕಲ್ಪಿಸುವ ಈಜೀಪುರ ಮೇಲ್ಸೇತುವೆ ನಿರ್ಮಾಣ ಕಾರ್ಯ ವಿಳಂಬ ಆರೋಪ ಹಿನ್ನೆಲೆಯಲ್ಲಿ ಯೋಜನೆಯ ಗುತ್ತಿಗೆದಾರ ಸಂಸ್ಥೆ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಟೆಂಡರ್ ಬಿಬಿಎಂಪಿ ರದ್ದು ಮಾಡಿತ್ತು. ಆದರೆ ಇದೀಗ ಮತ್ತದೇ ಸಂಸ್ಥೆಯ ಜತೆಗೆ ಮಾತುಕತೆಗೆ ಪಾಲಿಕೆ ಮುಂದಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹೌದು. ವಿವಾದಿತ ಸಂಸ್ಥೆ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಕೆಲ ತಿಂಗಳ ಹಿಂದೆ ಹೈಕೋರ್ಟ್ ಗರಂ ಆಗಿತ್ತು. ಅಲ್ಲದೆ ಎಫ್‌ಐಆರ್ ಕೂಡಾ ದಾಖಲಾಗಿ ಬಳಿಕ ಸರ್ಕಾರ ಟೆಂಡರ್ ರದ್ದತಿಗೆ ಪಾಲಿಕೆ ಸೂಚನೆ ನೀಡಿತ್ತು. ಇದೀಗ ಹೊಸದಾಗಿ ಟೆಂಡರ್ ಕರೆದ ಬಳಿಕ ಬಿಬಿಎಂಪಿ ಅಧಿಕಾರಿಗಳು ಮತ್ತದೇ ಕಂಪನಿಯ ಜತೆ ನಂಟು ಬಯಸಿದ್ದು, ಈ ಸಂಬಂಧ ಶೀಘ್ರದಲ್ಲಿ ಸಭೆ ಕೂಡ ಜರುಗಲಿದೆ.
ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ನೇತೃತ್ವದಲ್ಲಿ ಸಭೆ ನಿಗದಿಯಾಗಿದ್ದು, ಹಲವು ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದೆ. ಎಲ್ಲೋ ಅಧಿಕಾರಿಗಳು ಸಂಸ್ಥೆ ಯಿಂದ ಲಂಚ ಪಡೆದು ಮತ್ತದೇ ಸಂಸ್ಥೆಗೆ ಟೆಂಡರ್ ನೀಡಲು ಮುಂದಾಗಿರುವ ಆಪಾದನೆ ಕೇಳಿ ಬಂದಿದೆ.
Kshetra Samachara
18/05/2022 01:35 pm