ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಸಮಯದಲ್ಲಿ ನೂರಾರು ಕೋಟಿ ಅವ್ಯವಹಾರ - ಎಫ್‌ಐಆರ್‌ನ ಎಕ್ಸ್ ಕ್ಲೂಸಿವ್ ಡಿಟೈಲ್ಸ್ ಪಬ್ಲಿಕ್ ನೆಕ್ಸ್ಟ್‌ನಲ್ಲಿ

ಬೆಂಗಳೂರು: ಕೋವಿಡ್ ಸಮಯದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಸದ್ಯ ದೂರು ದಾಖಲಾಗಿದೆ. ಸರ್ಕಾರ ಮುಖ್ಯ ಲೆಕ್ಕ ಪತ್ರಾಧಿಕಾರಿ ಡಾ. ವಿಷ್ಣುಪ್ರಸಾದ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

ಎ1. ಡಾ.ಗಿರೀಶ್ ಎ2.ರಾಘು, ಎ3.ಮುನಿರಾಜು, ಎ4.ಲಾಜ್ ಎಕ್ಸ್ಪೋರ್ಟ್ ಎ5. ಪ್ರೊಡೆಂಟ್ ಮ್ಯಾನೇಜ್ಮೆಂಟ್. ಎ6.ಜನಪ್ರತಿನಿಧಿ. ಎ7.ಸರ್ಕಾರಿ ಅಧಿಕಾರಿಗಳು ಹಾಗೂ ಇತರರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಇನ್ನು ಎಫದ ಎಫ್‌ಐಆರ್‌ನಲ್ಲಿರೋ ಪ್ರಮುಖ ಅಂಶಗಳನ್ನ ಗಮನಿಸೋದಾದ್ರೆ.

ಕೊವಿಡ್ -19ರ ಮಹಾಮಾರಿಯ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಕೊವಿಡ್ 19 ನಿವಾರಣೆಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಎನ್ 95 ಮಾಸ್, ಪಿಪಿಇ ಕಿಟ್ ಹಾಗೂ ಇತರ ಸಾಮಾಗ್ರಿಗಳನ್ನು ಸಂಗ್ರಹಿಸಿರುವ ಸನ್ನಿವೇಶವನ್ನು /ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕಾನೂನಿನ ಎಲ್ಲಾ ಪ್ರಕ್ರಿಯೆಯನ್ನು ಗಾಳಿಗೆ ತೂರಿ ಕೆಟಿಪಿಪಿ ಕಾನೂನು ಮತ್ತು ಇತರ ಕಾನೂನನ್ನು ಉಲ್ಲಂಘಿಸಿರೋ ಬಗ್ಗೆ ಆರೋಪ ಕೇಳಿ ಬಂದಿದೆ. ಒಂದು ಅಪರಾಧೀಕರಣ ಷಡ್ಯಂತ್ರವನ್ನು ರೂಪಿಸಿ ಇಲ್ಲಿ ನೇಮಿಸಿರುವ ಅಧಿಕಾರಿಗಳು ಮತ್ತು ಖಾಸಗೀ ವ್ಯಕ್ತಿಗಳು ಮತ್ತು ಇತರರು ಒಳಗೊಂಡಂತಹ ಷಡ್ಯಂತ್ರದ ಮೂಲಕ ಈ ಅತೀ ಅವಶ್ಯಕ ಸಾಮಾಗ್ರಿಗಳನ್ನು ಸಂಗ್ರಹಿಸಿ ಆ ನೆಪದಲ್ಲಿ ನೂರಾರು ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ, ಸೆಕ್ಷನ್ 406,409 ಮತ್ತು 120(B) ರಡಿಯಲ್ಲಿ ಅಪರಾಧ ಎಸಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಡಾ.ವಿಷ್ಣು ಪ್ರಸಾದ್ ಮನವಿ ಮಾಡಿದ್ದಾರೆ.

ಇಲಾಖೆಯ ಮೂಲಕ ಕೊವಿಡ್-19ರ ಸಮಯದಲ್ಲಿ 15,51,713 ಪಿಪಿಇ ಕಿಟ್ ಖರೀದಿಗೆ 203,66,23,312 ರೂಪಾಯಿ ಹಾಗೂ 42,15,047 ಎನ್ 95 ಮಾಸೂ 9ಕೋಟಿ 75 ಲಕ್ಷ ಮೌಲ್ಯದಲ್ಲಿ ಸಂಗ್ರಹಿಸಿರುವುದು ದಾಖಲಿಸಿದ್ದು, ದಾಖಲೆಗಳಲ್ಲಿ ನೋಡಿದಾಗ ದಿನಾಂಕ:18-08-2020ರಂದು ಕರ್ನಾಟಕ ರಾಜ್ಯ ಸರ್ಕಾರ, ಕಾನೂನಾತ್ಮಕ, ಆಡಳಿತಾತ್ಮಕ ಅನು 2,59,263 2 95 , 2,59,263 2 55.41.35 , ವೈದ್ಯಕೀಯ ಸಿಬ್ಬಂದಿಗಳಿಗೆ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲಿ. ಬಳಸಲು ಅನುಮೋದನೆ ನೀಡಿದ್ದು, ಆ ಅನುಮೋದನೆಯಲ್ಲಿ ಕೆಟಿಪಿಪಿ ಕಾನೂನಿನ ಕಾಯ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡಬೇಕು ಮತ್ತು ಅನುಮೋದನೆ ನೀಡಿದರೂ,41.35 ಕೋಟಿಯ ಮೌಲ್ಯದ ಮೇಲೆ ಹೋಗಬಾರದೆಂದು ಷರತ್ತು ವಿಧಿಸಲಾಗಿತ್ತು. ಇದರ ನಂತರ ಇಲಾಖೆಯು ಟೆಂಡ‌ರ್ ಕರೆದಿದ್ದು, 3 ಸಂಸ್ಥೆಗಳು ಈ ಬಿಡ್ನಲ್ಲಿ ಭಾಗವಹಿಸಿರುತ್ತವೆ, ಲಾಜ್ ಕೋರ್ಟ್ಸ್ ಎಂಬ ಸಂಸ್ಥೆಯು ಒಂದು ಪಿಪಿಇ ಕಿಟ್ಟಿ, 1312.50ರೂ ನಂತೆ ಕನಿಷ್ಠ ಬಿಡ್ ದಾರರಾಗಿರುವುದರಿಂದ ಅವರ ಬಿಡ್ಅನ್ನು ಸ್ವೀಕರಿಸಿ ಅವರಿಂದ ಖರೀಧಿಗೆ ಆದೇಶವನ್ನು ದಿನಾಂಕ: 7-9-2020ರಂದು ಹೊರಡಿಸಲಾಗಿರುತ್ತದೆ. 2,59,263 ಸಂಖ್ಯೆಯ ಪಿಪಿಇ ಕಿಟ್‌ಗಳನ್ನು 15ದಿನಗಳ ಒಳಗಾಗಿ ಸರಬರಾಜು ಮಾಡಲು ಆದೇಶವಾಗಿರುತ್ತೆದೆ. ಇದರ ನಂತರ ದಾಖಲೆಗಳಲ್ಲಿ ಪಿಪಿಇ ಕಟ್‌ಅನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡುಬರುವುದಿಲ್ಲ, ಆದರೂ ಕೂಡ ಮೊತ್ತ.41,34,99,172-00 ರೂಗಳನ್ನು ಪೂಡೆಂಟ್ ಮ್ಯಾನೇಜೆಂಟ್ ಸಲೂಷನ್ಸ್ ಮುಂಬಯಿ ಎಂಬ ಸಂಸ್ಥೆಗೆ ದಿನಾಂಕ: 19.9.2020 ರಿಂದ 24.11.2020ರ ಸಮಯದಲ್ಲಿ ನೀಡಿರುವುದು ದಾಖಲೆಗಳಿಂದ ಕಂಡು ಬಂದಿರುತ್ತದೆ. ಇದಲ್ಲದೇ ಸುಮಾರು 41,34,99,187-00 ರೂಪಾಯಿಗಳನ್ನು ಸಂಖ್ಯೆ-2,59,263 ಪಿಪಿಇ ಕಿಟ್ಟಳಿಗೆ ಅಲ್ಲದೇ ಅದಕ್ಕಿಂತ ಹೆಚ್ಚುವರಿಯಾಗಿ ಸಂಖ್ಯೆ-55,784ಪಿಪಿಇ ಕಿಟ್ಟಳಿಗೆ ನೀಡಿರುತ್ತಾರೆ. ಈ ಹೆಚ್ಚುವರಿ ಪಿಪಿಇ ಕಿಟ್ಟಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೇ ಖರೀದಿಸಿರುವುದು ಹಾಗೂ ಮೊತ್ತ-41.35 ಕೋಟಿ ರೂಪಾಯಿಯ ಅನುದಾನವನ್ನು ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಯಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಕೂಡ ಈ ಸಂಪೂರ್ಣವಾದ ಮೊತ್ತವನ್ನು ಪಿಪಿಇ ಕಿಟ್ಗಳಿಗೆ ಮಾತ್ರ ವೆಚ್ಚ ಮಾಡಿರುವುದು ಕೂಡ ಕಾನೂನು ಬಾಹಿರವಾಗಿರುತ್ತದೆ.

ಇದಲ್ಲದೇ ಸಂಖ್ಯೆ-55,784 ಪಿಪಿಇ ಕಿಟ್ ಖರೀದಿಯ ಮೊತ್ತ.7,32,16,500 ರೂಪಾಯಿಯು ಪೂರ್ಣ ಪ್ರಮಾಣದಲ್ಲಿ ಕಾನೂನು ಬಾಹಿರವಾಗಿರುವುದು ಸ್ಪಷ್ಟವಾಗಿರುತ್ತದೆ.

ಇದಕ್ಕೂ ಮೀರಿ ಸಂಖ್ಯೆ-13,784 ಪಿಪಿಇ ಕಿಟ್ಟಳನ್ನು ಯಾವುದೇ ಸರಬರಾಜು ಆದೇಶ ಇಲ್ಲದೇ, ಪ್ರಕ್ರಿಯೆಯನ್ನು ಅಳವಡಿಸದೇ, ಖರೀದಿ ಮಾಡಿರುವುದು ಕಂಡು ಬಂದಿರುತ್ತದೆ. ಇದಕ್ಕೆ ಯಾವುದೇ ರೀತಿಯಾದ ಅನುದಾನದ ಅನುಮೋದನೆ ಇಲ್ಲದೇ ಖರೀದಿ ಮಾಡಿರುತ್ತಾರೆ, ಮತ್ತು ಸಂಖ್ಯೆ 13,784 ಪಿಪಿಇ ಕಿಟ್ಗಳನ್ನು ಎಲ್ಲಿಗೆ ನೀಡಿರುತ್ತಾರೆ ಎಂಬುದರ ಬಗ್ಗೆ ಯಾವುದೇ ದಾಖಲೆಗಳು ಕಂಡು ಬಂದಿರುವುದಿಲ್ಲ. ಈ ಪಿಪಿಇ ಕಿಟ್ಟಳಿಂದ ಮೊತ್ತ 1,80,91,500/- ರೂಗಳು ವೆಚ್ಚವಾಗಿರುವುದು ಕೂಡ ದಾಖಲೆಗಳಿಂದ ಕಂಡು ಬಂದಿರುತ್ತದೆ. ನಂತರ ಸರ್ಕಾರಿ ಆದೇಶ ಸಂಖ್ಯೆ: ದಿನಾಂಕ:20-12-2020ರಂತೆ ಮೊತ್ತ ??. 23,31,44,462-00 ರೂಪಾಯಿಗಳನ್ನು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಇವರಿಗೆ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ತ್ರಗಳ ಖರೀದಿಗೆ ಸರವು ನೀಡಿರುತ್ತದೆ. ನಂತರ ದಿನಾಂಕ: 20-03-2021ರಂದು ಸರ್ಕಾರವು ಮತ್ತೊಂದು ಆದೇಶದಲ್ಲಿ ರೂ.12.00 ಕೋಟಿಗಳನ್ನು ವಿಶೇಷ ಪ್ರಕರಣವೆಂದು ನೀಡಿದ್ದು, ಈ ಹಣವನ್ನು ಸಂಖ್ಯೆ-91,450 ಪಿಪಿಇ ಕಿಟ್ ಮತ್ತು ಎನ್ 95 ಮಾಧ್ಯಗಳನ್ನು ಖರೀಧಿಸಲು ಉಪಯೋಗಿಸತಕ್ಕದ್ದು ಹಾಗೂ ಈ ಮೊತ್ತವನ್ನು 30 ದಿನಗಳ ಒಳಗಾಗಿ ನೀಡತಕ್ಕದ್ದು, ಎಂಬ ಷರತ್ತನ್ನು ವಿಧಿಸಿರುತ್ತಾರೆ. ಮತ್ತೊಂದು ಸರ್ಕಾರಿ ಆದೇಶದ ಮೂಲಕ ದಿನಾಂಕ 20-3-2021రರಂದು ರೂ 49,016ರೂ ಹಣವನ್ನು ಪಿಪಿಇ ಕಿಟ್ ಮತ್ತು 95 ಮಾಸ್ಕ್ ಖರೀದಸಲು ನೀಡಿದ್ದು, ಕೆಟಿಪಿಪಿ ಕಾಯ್ದೆ ಯ ಅಡಿಯಲ್ಲಿ ಕಾನೂನಿಗೆ ಬದ್ದವಾಗಿ ಮತ್ತು ಸೂಕ್ಷ್ಮವಾದ ಬಳಕೆ ಪ್ರಮಾಣ ಪತ್ರವನ್ನು ಅಕೌಂಟೆಂಟ್ ಜನರಲ್ ಕಛೇರಿ ನೀಡಬೇಕೆಂದು ಎಂದು ಷರತ್ತು ವಿಧಿಸಿ ನೀಡಲಾಗಿರುತ್ತದೆ, ಈ ಸರ್ಕಾರಿ ಆದೇಶಗಳ ನಂತರ ಲಾಜ್ ಎಕ್ಸ್ ಪೋರ್ಟ್ ರವರಿಂದ ನೇರವಾಗಿ 6,22,350 ಸಂಖ್ಯೆಯ ಪಿಪಿಇ ಕಿಟ್ ಗಳನ್ನ 01,00,34,375 ರೂಗಳಿಗೆ ಖರೀದಿಸಿರುತ್ತಾರೆ, ಈ 5 ಖರೀದಿ ಆದೇಶಗಳನ್ನು ಯಾವುದೇ ರೀತಿಯಾದ ಟೆಂಡರ್ ಪ್ರಕ್ರಿಯೆ ಇಲ್ಲಿದೇ, ಯಾವುದೇ ವಿವಿಧ ಸಂಸ್ಥೆಗಳಿಂದ ಕೋಟೆಷನ್ ಕರೆಯದೇ, ನೇರವಾಗಿ ಲಾಜ್ ಎಕೆಗೆ ನೀಡಿರುವುದು ಕಾನೂನು ಬಾಹಿರವಾಗಿರುತ್ತದೆ ಹಾಗೂ ಕೆಟಿಪಿಪಿ ಕಾಯ್ದೆಯ ಉಲ್ಲಂಘನೆಯಾಗಿರುತ್ತೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಮೊತ್ತ. 13,16,03,800/- ರೂಗಳನ್ನು ಪೂಡೆಂಟ್ ಮ್ಯಾನೇಜೆಂಟ್ ಸಲ್ಯೂಷನ್ ಮುಂಬಯಿರವರಿಗೆ ದಿನಾಂಕ:05-11-2020ರಂದು ಪಾವತಿ ಮಾಡಿರುವುದು ದಾಖಲೆಗಳಿಂದ ಕಂಡುಬಂದಿರುತ್ತದೆ, ಸರ್ಕಾರದಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ, ಹಣ ಪಾವತಿ ಆಗಿರುವ ಮುನ್ನವೇ ಪೂಡೆಂಟ್ ಮ್ಯಾನೇಜೈಂಟ್ ಸಲ್ಯೂಷನ್ ಮುಂಬಯಿ ರವರಿಗೆ ಹಣ ಪಾವತಿ ಆಗಿರುವುದುಕಂಡು ಬಂದಿರುತ್ತದೆ,

2,67,960 ಪಿಪಿಇ ಕಿಟ್ಟಳನ್ನು ಕೆಎಸ್ ಎಂಸಿಎಲ್ ಸಂಸ್ಥೆಗೆ ನೀಡಿರುವುದಾಗಿ ದಾಖಲೆಗಳು ಲಭ್ಯವಿರುತ್ತದೆ, ಎರಡು ಖರೀದಿ ಆದೇಶಗಳನ್ನು ದಿನಾಂಕ 15.6.2021ರಂದು ಅಂದಿನ ನಿರ್ದೇಶಕರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಇವರು ನೀಡಿದ್ದು 3,00,000 ಪಿಪಿಇಕಿಟ್ ಗಳನ್ನು ಸರಬರಾಜು ಮಾಡಲು ನೀಡಿದ್ದು ಇದರಲ್ಲಿ ಕೇವಲ 267960 ಪಿಪಿಇಕಿಟ್ಟಳನ್ನು ಕೆಎಎಂಸಿಎಲ್ ಸರಬರಾಜು ಮಾಡಿರುವುದು ಕಂಡುಬಂದಿರುತ್ತದೆ. ಈ ಪೂರ್ಣವಾದಂತಹ ಪಿಪಿಇ ಕಿಟ್ಟರೀದಿ ಹಾಗೂ ಸರಬರಾಜಿಗಿ ಯಾವುದೇ ಹಣ ಪಾವತಿಸಿರುವುದಿಲ್ಲ.. ಆದರೂ ಈ ಪೂರ್ಣ ಮೊತ್ತದ ಖರೀದಿ ರೂ.

35,16,97,500 ವೆಚ್ಚದ ಖರೀದಿಯಾಗಿರುತ್ತದೆ. ಈ ಪೂರ್ಣ ವೆಚ್ಚದ ಖರೀದಿಯಲ್ಲಿ ಕಾನೂನು ಬಾಹಿರವಾಗಿದೆ ಎಂದು ದಾಖಲೆಗಳಲ್ಲಿ

ಸ್ಪಷ್ಟವಾಗಿರುತ್ತದೆ.

ದಾಖಲೆಗಳ ಪರಿಶೀಲನೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯವರು 45000 ಪಿಪಿಇಕಿಟ್ ಗಳನ್ನು ಉಪಯೋಗಸದೇ ಸ್ವಾಲಿಟ್ಟಿರುತ್ತಾರೆ, ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯವರು 34390 ಪಿಪಿಇಕಿಟ್ ಗಳನ್ನು ಬಳಸದೇ ಇಟ್ಟಿರುತ್ತಾರೆ. ಈ ಬಳಕೆ ಆಗದೇ ಉಳಿದ ಪಿಪಿಇಕಿಟ್ಟಳ ಒಟ್ಟು ಮೊತ್ತರ, 9,99,54,625 ಗಳ ಮೌಲ್ಯವಾಗಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿರುತ್ತದೆ. ದಾಖಲೆಗಳಿಂದ ಸ್ಪಷ್ಟವಾಗಿ ಕಂಡುಬರುವ ಅವ್ಯವಹಾರ ಹಾಗೂ ಕಾನೂನು ಬಾಹಿರ ನಡೆ ಅಂದರೆ ಈ ಪೂರ್ಣಪ್ರಮಾಣದ ವಹಿವಾಟುಗಳು ಲಾಜ್ ಎಕ್ಸ್ ಪೋರ್ಟ್ಸ್ ಜೊತೆಗೆ ನಡೆದಿದ್ದರೂ ಕೂಡ ಇದರ ಸಪ್ಪೆಯನ್ನು ಪೂದೆಂಟ್ ಮಾನೆಪ್ಟೆಂಟ್ ಸಲ್ಯೂಷನ್ಸ್ ಎಂಬ ಸಂಸ್ಥೆಯವರು ಮಾಡಿರುವುದಾಗಿ ತೋರಿಸಿ, ಪೂರ್ಣ ಪ್ರಮಾಣದ ಮೊತ್ತವನ್ನು ಪೂಡೆಂಟ್ ಮ್ಯಾನೆಜೆಂಟ್ ಸಲ್ಯೂಷನ್ಸ್ ಸಂಸ್ಥೆಯವರಿಗೆ ಪಾವತಿಯಾಗಿರುತ್ತದೆ. ದಾಖಲೆಗಳಲ್ಲಿ ಮತ್ತು ಕಾನೂನಿನ ಅಡಿಯಲ್ಲಿ ಡಿಎಂಇ ನಿರ್ದೇಶಕರು, ಇವರು ಯಾವುದೇ ಕಾರಣಕ್ಕೂ ಯಾವುದೇ ಹಣವನ್ನು ಪೂಡೆಂಟ್

ಮ್ಯಾನೆಡ್ರೈಂಟ್ ಸಲ್ಯೂಷನ್ಮವರಿಗೆ ನೀಡಲು ಅವಕಾಶವಿಲ್ಲದಿದ್ದರೂ ಕೂಡ ರ, 39,54,07,627 ರೂಪಾಯಿಗಿಂತ ಹೆಚ್ಚು ಹಣವನ್ನು ಪಾವತಿಸಿರುವುದು ಹಾಗೂ ಲಾಜ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್ ರವರಿಗೆ ಯಾವುದೇ ವ್ಯವಹಾರ ಆಗಿರುವುದಿಲ್ಲ ಎಂದುಕಂಡು ಬಂದಿರುತ್ತದೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗಿ ಮೆ, ಲಾಜ್ ಎಕಪೋರ್ಟ್ಸ್ ಲಿಮಿಟೆಡ್ ಎಂಬ ಸಂಸ್ಥೆಯು ಕಾನೂನಿನ ಅಡಿಯಲ್ಲಿ ಟೆಂಡ‌ರ್ ಪ್ರಕ್ರಿಯೆಯಲಿ ಭಾಗವಹಿಸಲು ಅರ್ಹರಿಲ್ಲ,ದಿದ್ದರ ಮತ್ತು ಯೋಗ್ಯರಿಲ್ಲದಿದ್ದರೂ ಕೂಡ ಲಾಜ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್ ಇವರಿಗೆ ದೊಡ್ಡ ಪ್ರಮಾಣದ ಬೆಂಡರ್ನ್ನು ನೀಡಿದ್ದು ಎನ್-95 ಮಾಸ್, ಮತ್ತು ಪಿಸಿಇ ಕಿಟ್ ಗಳನ್ನು ಹೆಚ್ಚಾಗಿ ಖರೀದಿ ಮಾಡಿದ್ದು ಈ ಖರೀದಿಯ ಪೂರ್ಣ ಮೊತ್ತವನ್ನು ಟೆಂಡರ್‌ನಲ್ಲಿ ಭಾಗವಹಿಸದೇ ಇರುವ ಸಂಸ್ಥೆಯಾದ ಪೂಡೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್ ಸಂಸ್ಥೆಯವರಿಗೆ ಹಣವನ್ನು ಪಾವತಿ ಮಾಡಿದ್ದು ಮತ್ತು ಖರೀದಿಯಲಿ ಎನ್-95 ಮಾಸ್ಟ್ ಮತ್ತು ಪಿಪಿಇ ಕಿಟ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಡೆಲಿವರಿಯಾಗದೇ ಇರುವುದು ಕಂಡುಬಂದಿರುವುದರಿಂದ ಲಾಜ್ ವಿಕೆ,ಪೋರ್ಟ್ಸ್ ಲಿಮಿಟೆಡ್ ಮತ್ತು ಪೂಡೆಂಟ್ ಮ್ಯಾನೆಜೆಮೆಂಟ್ ಸಲ್ಯೂಷನ್ಸ್, ಎಂಬ ಎರಡು ಸಂಸ್ಥೆಗಳೊಂದಿಗೆ ಡಿಎಂಇ ಅಂದಿನ ನಿರ್ದೇಶಕರ ಡಾ.ಪಿ.ಜಿ. ಗಿರೀಶ್, ಜಂಟಿ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ ಶ್ರೀ ರಘು ಜಿ.ಪಿ,ಮತ್ತು ಆರೋಗ್ಯ ಸಲಕರಣಾಧಿಕಾರಿಗಳಾದ ಶ್ರೀ ಮುನಿರಾಜುರವರು ಮತ್ತು ದೊಡ್ಡ ಮಟ್ಟದಲಿ..ಇಂತಹ ರಾಜಕೀಯ ಕಾರ್ಯಾಂಗದಲಿ, ಕಾರ್ಯನಿರ್ವಹಿಸುತ್ತಿದ್ದಂತಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಶಾಮೀಲಾಗಿ ಅಪರಾಧೀಕರಣದ ಪದ್ಯಂತರವನ್ನು ರೂಪಿಸಿ ಸರ್ಕಾರಕ, ಅಂದಿನ ತುರ್ತು ಪರಿಸ್ಥಿತಿಯ ಲಾಭವನ್ನು ಪಡೆದು ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ಸರ್ಕಾರಕ್ಕೆ ಸರ್ಕಾರದ ಆಸ್ತಿಗೆ ತಮ್ಮ ಸುಪರ್ದಿಯಲ್ಲಿದ್ದಂತಹ ಸರ್ಕಾರದ ಆಸ್ತಿಗೆ ಮತ್ತು ಸರ್ಕಾರದ ಹಣವನ್ನು ನಷ್ಟವುಂಟು ಮಾಡಿ ತಮಗೆ ಹೆಚ್ಚು ಪ್ರಮಾಣದ ಲಾಭವನ್ನು ಪಡೆಯಲು ಕೆಟಿಪಿಪಿ ಕಾಯ್ದೆಯ ಪೂರ್ಣ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಸಂಪೂರ್ಣ ಪ್ರಕ್ರಿಯೆ ಕಾನೂನು ಬಾಹಿರವಾಗಿ ನಡೆದಿರುತ್ತದೆ. ಇವರ ಈ ನಡೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿರುವುದಲ್ಲದೆ ಇಲ್ಲಿ ನೇಮಿಸಿರುವಂತಹ ಎಲ್ಲಾ ಅಧಿಕಾರಿಗಳು ಮತ್ತು ಈಗಾಗಲೇ ಹೇಳಿದ ಹಾಗೆ ರಾಜಕೀಯ ಕಾರ್ಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತಹ ಅಧಿಕಾರಿಗಳು ದೊಡ್ಡ ಪ್ರಮಾಣದ ಲಾಭವನ್ನು ಲಾಜ್‌ಎಕ್ಸ್‌ಪೋರ್ಟ್ಸ್ ರವರಿಂದ ಪಡೆದು ಸರ್ಕಾರಕ್ಕೆ ಆಂದಾಜು ಒಟ್ಟು ರೂ. 167.00 ಕೋಟಿಗಳ ಆರ್ಥಿಕ ನಷ್ಟವಾಗಿರುವುದು ಕಾನೂನಿನ ಅಡಿಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 406,409 ಮತ್ತು 120(b) ರಡಿಯಲ್ಲಿ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸದರಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ಕೋರಿ ದೂರು.

Edited By : Nagaraj Tulugeri
PublicNext

PublicNext

14/12/2024 07:33 am

Cinque Terre

5.38 K

Cinque Terre

4