ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್, ಜೈಲಿನಲ್ಲಿರೋ ಪವಿತ್ರಾ ಗೌಡ ಸೇರಿ 7 ಜನರಿಗೆ ಜಾಮೀನು ಮಂಜೂರಾಗಿದೆ. ಒಂದು ಕಡೆ ದರ್ಶನ್ ಹಾಗೂ ಅವರ ಬೆಂಬಲಿಗರಿಗೂ ಬೇಲ್ ಸಿಕ್ಕಿರೋ ಖುಷಿಯಲ್ಲಿದ್ರೆ, ಕಾಮಾಕ್ಷಿಪಾಳ್ಯ ಪೊಲೀಸ್ರು ಜಾಮೀನೂ ಮಂಜೂರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಹೀಗಾಗ್ಲೆ ಮಧ್ಯಂತರ ಜಾಮೀನು ಪ್ರಶ್ನಿಸಿ ಕಾಮಾಕ್ಷಿಪಾಳ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಆದ್ರೆ ಜಾಮಿನೂ ಮಂಜೂರಾದ ಬೆನ್ನಲ್ಲೆ ಆ ಅರ್ಜಿ ವಜಾ ಆಗಲಿದ್ದು, ಸದ್ಯ ಹೊಸದಾಗಿ ಹೈಕೋರ್ಟ್ ನೀಡಿರೋ ಜಾಮೀನು ಪ್ರಶ್ನಿಸಿ ಸುಪ್ರಿಂ ಮೊರೆಹೊಗುವ ಸಾಧ್ಯತೆಯಿದೆ.
ಈಗಾಗ್ಲೆ ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಚರ್ಚೆ ನಡೆಸಿದ್ದು, ಕೋರ್ಟ್ ಆದೇಶದ ಪ್ರತಿ ಸಿಕ್ಕ ನಂತರ ಎಸ್ ಪಿಪಿಯವರ ಜೊತೆಗೆ ಚರ್ಚಿಸಿ ಸುಪ್ರೀಂ ಮೊರೆ ಹೋಗಲಿದ್ದಾರೆ.
PublicNext
13/12/2024 06:10 pm