ಆನೇಕಲ್ :ಬಿಜೆಪಿ ಅಂದ್ರೆ ಕಮಿಷನ್ ಪಕ್ಷ ಬೆಳಗ್ಗೆದ್ದರೆ ಟಿವಿ ಚಾನೆಲ್ ನಲ್ಲಿ ನೋಡುತ್ತಿರುವುದು 40 ಪರ್ಸೆಂಟ್ ಕಮಿಷನ್ ಅಂತ ಈಗಾಗಲೇ ರಾಜ್ಯ ಸರ್ಕಾರ ನ್ಯಾಯಾಂಗವನ್ನು ಕೋರ್ಟ್ ಗಳನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಎಲ್ಲಾ ಕೊಂಡುಕೊಂಡಿದ್ದಾರೆ ಅವರಿಗೆ ಏನು ಬೇಕು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಚುನಾವಣೆ ಮಾಡುವ ರೀತಿ ಮಾಡಿದ್ದಾರೆ ಎಂದು ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಆನೇಕಲ್ ಪಟ್ಟಣದ 3 ವಾರ್ಡಗಳಿಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು ಈಗಾಗಲೇ ಬಿಜೆಪಿ ಬೆಳಗೆದ್ದರೆ ಬರೀ ಕಮಿಷನ್ ಸಂಬಂಧಪಟ್ಟಹಾಗೆ ಸುದ್ದಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿದೆ ಬಿಜೆಪಿ ಅನ್ನೋದು ಒಂದು ಕಮಿಷನ್ ಪಕ್ಷ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು ಮೂರು ವಾರ್ಡಗಳಲ್ಲಿ ಸ್ಪರ್ಧೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಅಂತ ಮತದಾನದ ಬಳಿ ಮನವಿ ಮಾಡಿಕೊಂಡರು ಅಲ್ಲದೇ
ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ ಕೋವಿಡ್ ಸಂದರ್ಭದಲ್ಲಿ ಹಗಲು-ರಾತ್ರಿ ಕಷ್ಟಪಟ್ಟಿದ್ದೇವೆ ಹೀಗಾಗಿ ಜನರು ನಮ್ಮ ಕೈಬಿಡುವುದಿಲ್ಲ ಅಂತ ತಿಳಿಸಿದ್ರೆ..
Kshetra Samachara
17/06/2022 10:48 pm