ಬೆಂಗಳೂರು ದಕ್ಷಿಣ: ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡಿದ್ದಾರೆ ಎಂದು ಹೇಳಿಕೆಯನ್ನ ನೀಡಿದ್ದ ವಿಧಾನ ಪರಿಷತ್ ಸದಸ್ಯ ಶರವಣ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರವನ್ನ ನೀಡಿದ್ದಾರೆ.
ಬನ್ನೇರುಘಟ್ಟದಲ್ಲಿ ನಡೆದ ಬೃಹತ್ ಭೋವಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ಗೆಲ್ಲಬಾರದು ಎನ್ನುವುದಾದರೇ ಅವರೇ ನಮಗೆ ಸಪೋರ್ಟ್ ಮಾಡಬಹುದಿತ್ತು ಇದರಲ್ಲಿಯೇ ತಿಳಿಯುತ್ತದೆ. ಯಾರು ಬಿಜೆಪಿಯ ಬಿ ಟೀಂ ಎಂದು ಅಲ್ಪಸಂಖ್ಯಾತ ಮನ್ಸೂರ್ ಅಲಿಖಾನ್ ರನ್ನ ಕ್ಯಾಂಡಿಟೇಟ್ ಆಗಿ ಮೊದಲು ಹಾಕಿದ್ದು ನಾವು ಅದಾದ ಮರುದಿನ ಅವರು ಕುಪೆಂದ್ರ ರೆಡ್ಡಿ ರನ್ನ ಕ್ಯಾಂಡಿಟೇಟ್ ಆಗಿ ಹಾಕಿದ್ರು ಯಾತಕ್ಕಾಕಿದ್ರು, ಅವರು ಗೆಲ್ಲಲ್ಲಾ ಅಂತ ಗೊತ್ತಿದ್ರೂ ಯಾಕ್ ಹಾಕಿದ್ರು. ನಮಗೆ ಸಪೋರ್ಟ್ ಮಾಡಿದ್ರೆ ನಾವು ಗೆಲ್ತಿದ್ವಲಾ ಇದರಲ್ಲಿಯೇ ತಿಳಿಯುತ್ತದೆ ಯಾರು ಬಿಟೀಮ್ ನಾವಾ ಅವರ ಎಂದು ನಾವು ದೇವೇಗೌಡ ನಿಂತಿದ್ದಾಗ ರಾಜ್ಯಸಭೆಗೆ , ನಾವು ಕ್ಯಾಂಡಿಡೇಟ್ ಹಾಕಲಿಲ್ಲ.
ನಾವು 80ಜನ ಎಮ್ ಎಲ್ ಎ ಗಳು ಇದ್ದೇವು ಕುಮಾರಸ್ವಾಗಿಗೆ 37 ಜನ ಎಂಎಲ್ಎ ಗಳಿದ್ದರು ಬಿಜೆಪಿ ಬರಬಾರದು ಅಂತಿದ್ದರೆ ನಮಗೆ ಸಪೋರ್ಟ್ ಮಾಡಬೇಕಾಗಿತ್ತು ಎಂದರು. ವಿರೋಧ ಪಕ್ಷದಿಂದ ಕೆಳಗಿಳಿಸೋ ತಾಕತ್ತು ರಾಹುಲ್ ಗಾಂಧಿಗಿದೇಯಾ ಎನ್ನುವ ಸಿ ಎಂ ಇಬ್ರಾಹಿಂ ಹೇಳಿಕೆಯ ವಿರುದ್ಧವೂ ಗುಡುಗಿದ ಸಿದ್ದರಾಮಯ್ಯ, ಆ ಪಾರ್ಟಿಯವನು, ನನಗಿಳಿಸೋಕೆ ಅವನ್ಯಾರು ನನಗೆ ನಮ್ಮ ಎಮ್ ಎಲ್ ಎ ಗಳು ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದಾರೆ. ಕೇಳೋದಕ್ಕೆ ಅವನ್ಯಾರು ಎಂದು ಗರಂ ಆದರು.
Kshetra Samachara
12/06/2022 10:11 pm