ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಏರಿಯಾದಲ್ಲಿ ಇರಬೇಡ ಅಂತ ಚಿಕ್ಕಪ್ಪ ಬೈತಿದ್ರು"; ವೀಡಿಯೊ ಹರಿಬಿಟ್ಟ ಮತೀನ್

ಮಾಜಿ ಕಾರ್ಪೊರೇಟರ್ ನಜೀಮಾ ಪತಿ ಅಯೂಬ್ ಖಾನ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ, ಅಜ್ಞಾತ ಸ್ಥಳದಿಂದ ಕೊಲೆ ಆರೋಪಿ ಮತೀನ್ ಖಾನ್ ವೀಡಿಯೊ ಹರಿ ಬಿಟ್ಟಿದ್ದಾನೆ.

"ನನ್ನ ಮೇಲೆ ಹಲ್ಲೆ ಮಾಡಲು ಅವರೇ ಬಂದ್ರು. ನನ್ನ ಚಿಕ್ಕಪ್ಪ ಅಯೂಬ್ ಖಾನ್ ಹಾಗೂ ಅವರ ಮಗ ಹಲ್ಲೆಗೆ ಬಂದ್ರು. ಜೊತೆಗೆ ಅಯೂಬ್ ಖಾನ್ ಮಗನೇ ಮೊದಲಿಗೆ ಲಾಂಗ್ ನಲ್ಲಿ ಹಲ್ಲೆ ಮಾಡಲಿಕ್ಕೆ ಬಂದ, ಏರಿಯಾದಲ್ಲಿ ಇರಬೇಡ ಅಂತ ಅಯೂಬ್ ಖಾನ್ ಯಾವಾಗಲೂ ಬೈತಿದ್ರು. ಸುಖಾಸುಮ್ಮನೇ ನನ್ನ ಮೇಲೆ ಪೊಲೀಸರಿಗೆ ದೂರು ಕೊಡ್ತಿದ್ರು.

ಹಲವು ಬಾರಿ ಪೊಲೀಸ್‌ ಸ್ಟೇಷನ್ ಗೆ ಕರೆಸಿ ವಾರ್ನ್ ಮಾಡಿಸಿದ್ದಾರೆ. ಮೊನ್ನೆ ಘಟನೆ ನಡೆದಾಗ ನಾನು ನಮಾಜ್ ಮುಗಿಸಿ ಬರ್ತಿದ್ದೆ. ಅವರು ಹಾಗೂ ಅವರ ಮಗ ಕೂಡ ನಮಾಜ್ ಮುಗಿಸಿ ಬರ್ತಿದ್ರು. ಬೇಕರಿ ಬಳಿ ನಿಂತಿದ್ದ ನನಗೆ ಮೊದಲಿಗೆ ಅವರೇ ಬೈದ್ರು, ಅವರು ಬೈತಿದ್ದಾಗೆ ಅವರ ಮಗ ನನಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ" ಎಂಬುದಾಗಿ ಹೇಳಿಕೆ ನೀಡಿದ್ದಾನೆ.

Edited By :
PublicNext

PublicNext

15/07/2022 05:38 pm

Cinque Terre

37.05 K

Cinque Terre

0

ಸಂಬಂಧಿತ ಸುದ್ದಿ