ಬೆಂಗಳೂರು: ಇ.ಡಿ. ಇ.ಡಿ.ನೋಟಿಸ್ ವಿರುದ್ಧ ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ಡಬಲ್ ರೋಡ್, ಹೊಸೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಡಬಲ್ ರೋಡ್ ಲಾಲ್ ಬಾಗ್ ಗೇಟ್ ನಿಂದ ಶಾಂತಿನಗರ ಟಿಟಿಎಂಸಿ ಬಳಿ ಇರುವ ಇ.ಡಿ. ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಇದರಿಂದ ಸುತ್ತಮುತ್ತ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾಮಾನ್ಯವಾಗಿ ಡಬಲ್ ರೋಡ್ ಹಾಗೂ ಹುಸೂರು ರಸ್ತೆಯಲ್ಲಿ ಅತಿ ಹೆಚ್ಚು ವಾಹನ ಓಡಾಟ ಇರುತ್ತದೆ. ಕಾಂಗ್ರೆಸ್ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಇನ್ನಷ್ಟು ಉಲ್ಬಣಗೊಂಡಿದೆ.
ರಸ್ತೆಯಲ್ಲಿ ಹೆಚ್ಚು ಆ್ಯಂಬುಲನ್ಸ್ ಓಡಾಟ ಇದ್ದು, ಟ್ರಾಫಿಕ್ ಜಾಮ್ ನಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ.
ಕಾಂಗ್ರೆಸ್ ವರಿಷ್ಠರಿಗೆ ಇ.ಡಿ. ನೋಟಿಸ್ ಹಿನ್ನಲೆ ದೇಶಾದ್ಯಂತ ಕೈ ಪ್ರತಿಭಟನೆ ನಡೆಸುತ್ತಿದೆ. ನಗರದ ಡಬಲ್ ರಸ್ತೆಯ ಇಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಕೆಪಿಸಿಸಿ ನಡೆಸಲು ಮುಂದಾಗಿದೆ. ಹೊಸೂರು ರಸ್ತೆ ಲಾಲ್ ಬಾಗ್ ನಿಂದ ಇಡಿ ಕಚೇರಿ ಮುತ್ತಿಗೆ ಯತ್ನಿಸಲು ಮುಂದಾಗಿದೆ. ಹೊಸೂರು ರಸ್ತೆಯಲ್ಲಿ ಪ್ರತಿಭಟನೆ ಹಿನ್ನಲೆ ಸಂಚಾರ ದಟ್ಟಣೆ ಉಂಟಾಗಿದೆ. ಹೊಸೂರು ರಸ್ತೆಯಲ್ಲಿ ನಿಮ್ಹಾನ್ಸ್, ಕಿದ್ವಾಯಿ ಹಾಗೂ ಇನ್ನಿತರೆ ಆಸ್ಪತ್ರೆಗಳಿದ್ದು, ಆ್ಯಂಬ್ಯುಲನ್ಸ್ ಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಅದರಲ್ಲೂ ಹೊಸೂರು ರಸ್ತೆ ಸಂಪರ್ಕಿಸುವ ರಸ್ತೆಯಲ್ಲಿ ಕಿ.ಲೋ ಮೀಟರ್ ವರಗೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಟ್ರಾಫಿಕ್ ಪೊಲೀಸರು ಟ್ರಾಫಿಕ್ ಜಾಮ್ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಇತ್ತ ಡಬಲ್ ರಸ್ತೆಯಲ್ಲೂ ವಾಹನಗಳು ನಿಂತಲ್ಲೇ ನಿಂತಿದ್ದು, ಸಂಪೂರ್ಣ ಜಾಮ್ ಆಗಿದೆ.
ಕಚೇರಿಗೆ ತೆರಳುವ ವೇಳೆಯೇ ಪ್ರತಿಭಟನೆ ನಡೆಸಿರುವುದು ತೀರಾ ಕಿರಿಕಿರಿ ಯಾಗಿದೆ. ಕಳೆದ ಬಾರಿ ಮೇಕೆದಾಟು ಪಾದಯಾತ್ರೆ ವೇಳೆ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಆಕ್ರೋಶಗೊಂಡಿದ್ದರು.
ಇದೀಗ ಮತ್ತೆ ಕಾಂಗ್ರೆಸ್ ಪ್ರತಿಭಟನೆಯಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
Kshetra Samachara
13/06/2022 04:43 pm