ಬೆಂಗಳೂರು: ಎರಡು ದಿನ ಮುಂಚಿತವಾಗಿ ಯಾಕೆ ಹಾಜರಿಗೆ ಸಹಿ ಮಾಡುತ್ತಿಯಾ ಎಂದು ಪ್ರಶ್ನಿಸಿದ ಸ್ಥಳೀಯ ನಿವಾಸಿಗೆ ಪುರಸಭೆ ಮುಖ್ಯ ಅಧಿಕಾರಿಗಳ ಎದುರೇ ವಾಟರ್ ಮ್ಯಾನ್ ಅವಾಚ್ಯ ಶಬ್ದಗಳಿಂದ ಬೈದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.
ಈ ಘಟನೆ ನಡೆದು ನಾಲ್ಕು ದಿನ ಕಳೆದರೂ ಕೂಡ ವಾಟರ್ ಮ್ಯಾನ್ ವೆಂಕಟಸ್ವಾಮಿ ವಿರುದ್ಧ ಚಂದಾಪುರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡೆಯು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಗ್ಗಲೂರು ಗ್ರಾಮದ ವ್ಯಕ್ತಿ ನಾಗೇಂದ್ರ ದಾಖಲಾತಿ ಕೆಲಸದ ಮೇಲೆ ಚಂದಾಪು ಪುರಸಭೆಗೆ ಭೇಟಿ ನೀಡಿದ್ದರು. ಈ ವೇಳೆ ವಾಟರ್ ಮ್ಯಾನ್ ವೆಂಕಟಸ್ವಾಮಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವುದನ್ನು ಗಮನಿಸಿದ ನಾಗೇಂದ್ರ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇದರಿಂದ ಕೆರಳಿದ ವಾಟರ್ ಮ್ಯಾನ್ ವೆಂಕಟಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ಗುಂಡಾಗಿರಿ ವರ್ತನೆ ತೋರಿದ್ದಾನೆ. ಎಂಎಲ್ಎಗೆ ಹೇಳ್ತಿಯಾ ಹೇಳು ಗುದ್ದಿ ಬಿಡ್ತೀನಿ. ಎಂಪಿ ನಾರಾಯಣ ಸ್ವಾಮಿಗೆ ಹೇಳ್ತಿಯಾ ಏನು ಮಾಡಿಕೊಳ್ಳುವುದಕ್ಕೆ ಆಗೋದಿಲ್ಲ ಎಂದು ವಾಟರ್ ಮ್ಯಾನ್ ವೆಂಕಟಸ್ವಾಮಿ ಫುಲ್ ಅವಾಜ್ ಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೇಂದ್ರ ಸಚಿವರಿಗೆ ಹಾಗೂ ಎಂಎಲ್‌ಎ ಗೆ ಬೈದಿರುವ ವಿಡಿಯೋ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ.
PublicNext
31/05/2022 07:27 pm