ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ಫ್ಯೂ ಗೆ ಜನರು ಸಹಕಾರ ಕೊಡಬೇಕು - ಸಚಿವ ಸುಧಾಕರ್

ಬೆಂಗಳೂರು: ಹುಬ್ಬಳ್ಳಿಯಲ್ಲಿ ಎರಡು ದಿನ ಸಭೆ ಇದ್ದು, ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸುತ್ತಿದ್ದಾರೆ

ಮುಂಬರುವ ಸಾರ್ವತ್ರಿಕ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಬಿಬಿಎಂಪಿ ಚುನಾವಣೆ, ಪರಿಷತ್ ಫಲಿತಾಂಶಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಹತ್ತು ದಿನಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದೀವಿ,ಇದರ ಪಾಲನೆ ಒಳ್ಳೆ ರೀತಿಯಲ್ಲಿ ಆಗಬೇಕು,ಜನರು ಸಹಕಾರ ಕೊಡಬೇಕು.ಹತ್ತು ದಿನಗಳ ಕಾಲ ಪರಿಸ್ಥಿತಿ ಗಮನಿಸ್ತೇವೆ, ನಂತರ ಸಿಎಂ, ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

15-18 ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಗೆ ಕೇಂದ್ರ ಸೂಚಿಸಿದೆ, ನಮ್ಮಲ್ಲಿ ಕೋವ್ಯಾಕ್ಸಿನ್ ಲಸಿಕೆ ಅಗತ್ಯದಷ್ಟು ಸಂಗ್ರಹ ಇಲ್ಲ. ಕೇಂದ್ರದ ಎದುರು ಕೋವ್ಯಾಕ್ಸಿನ್ ಗೆ ಬೇಡಿಕೆ ಇಡ್ತೇವೆ

ಕೇಂದ್ರದಿಂದ ಕೋವ್ಯಾಕ್ಸಿನ್ ಸರಾಗವಾಗಿ ಪೂರೈಕೆ ಆಗುವ ವಿಶ್ವಾಸ ಇದೆ ಎಂದರು

Edited By : Shivu K
PublicNext

PublicNext

28/12/2021 02:11 pm

Cinque Terre

26.32 K

Cinque Terre

2

ಸಂಬಂಧಿತ ಸುದ್ದಿ