ಬೆಂಗಳೂರು: ಸುಮಾರು 7ರಿಂದ 8 ಎಕರೆ ಕೆರೆಯ ಜಾಗ ಹೂಳು ತುಂಬಿ ಹಾಳಾಗಿ, ಯಾರೂ ಆ ಕಡೆ ತಲೆ ಹಾಕ್ದೆ ಇರೋ ಹಾಗಾಗಿದೆ! ಅಧಿಕಾರಿಗಳು ಸ್ಯಾಂಕ್ಷನ್ ಆದ ದುಡ್ಡನ್ನು ತಮ್ಮ ಜೇಬಿಗೆ ಹಾಕ್ಕೊಂಡು ಸುಮ್ಮನಾಗಿದ್ದಾರೆ. ಹಾಗಾದ್ರೆ ಈ ಜಾಗ ಯಾವ್ದು, ಎಲ್ಲಿದೆ ? ನೋಡೋಣ ಬನ್ನಿ...
ಗಲೀಜು ತುಂಬಿರುವ ಜಾಗ, ಬರೀ ಪ್ಲಾಸ್ಟಿಕ್ ನಿಂದ ಕೂಡಿರುವ ಕೊಳಚೆ, ಇದರ ಮಧ್ಯೆ ಹಸು ಮೇವು ತಿನ್ನುತ್ತಿರುವ ದೃಶ್ಯ! ಕೆರೆ, ಕೊಳಚೆಯಾಗಿ ರಾರಾಜಿಸ್ತಿರುವ ಈ ಸ್ಥಳ ಇರೋದು ಉಲ್ಲಾಳ್ ವಾರ್ಡ್ ನ ಗಾಂಧಿನಗರದಲ್ಲಿ. ಈ ಕೆರೆ ಕೆಂಗೇರಿಯಿಂದ ಪ್ರಾರಂಭವಾಗಿ ಶಿರ್ಕೆವರೆಗೂ ಇದೆ.
ಕೊಳೆತು ನಾರುತ್ತಿರುವ ಈ ಕೆರೆಯನ್ನು ಪಾರ್ಕ್ ಮಾಡುವುದಾಗಿ, ಕೆರೆ ಹೂಳು ತೆಗೆಯುವುದಾಗಿ ಅಧಿಕಾರಿಗಳು ಹಣ ಮಂಜೂರು ಮಾಡಿದ್ದಾರೆ. ಇತ್ತ ಕೆಲಸಾನು ಮಾಡಿಲ್ಲ, ಅತ್ತ ಹಣನೂ ಇಲ್ಲ! ಹಾಗಾದ್ರೆ ಹಣ ಎಲ್ಲಿ ಹೋಯ್ತು? ಸ್ಥಳೀಯರ ಕಣ್ಣಿಗೆ ಕಾಣುವ ಹಾಗೆ 2 ದಿನವಷ್ಟೇ ಕೆಲಸ ಮಾಡಿ ಬಿಟ್ಟಿದ್ದಾರೆ ಅಷ್ಟೇ.
ಸ್ಯಾಂಕ್ಷನ್ ಆಗೋದು ಒಟ್ಟು 3-4 ಕೋಟಿ. ಆದ್ರೆ, ಕೆಲಸ ಮಾಡೋದು 2-3 ಲಕ್ಷ! ಮಿಕ್ಕಿದ ಹಣ ಯಾರ ಖಜಾನೆ ತುಂಬುತಿದ್ಯೋ ಗೊತ್ತಿಲ್ಲ. ಒಟ್ಟಿನಲ್ಲಿ ಜನರ ಹೆಸರೇಳಿ ಹಣ ಲೂಟಿ ಮಾಡ್ತಿರುವ ಅಧಿಕಾರಿಗಳಿಗೆ ಅದು ಯಾವಾಗ ಬುದ್ಧಿ ಬರುತ್ತೋ? ಜನರನ್ನು ಹೀರಿ ತಿನ್ನುವ ತಿಗಣೆ ಅಧಿಕಾರಿಗಳಿಗೆ ತಕ್ಕ ಶಾಸ್ತಿಯಾಗಬೇಕು. ಮಿಕ್ಕಿದ ಹಣ ವಸೂಲಿಯಾಗಿ, ಕೆರೆಯ ಕಾಮಗಾರಿ ಮುಂದುವರೆಯಬೇಕು. ಮಕ್ಕಳಿಗೆ, ಸಾರ್ವಜನಿಕರಿಗೆ ಚೆಂದದ ಪಾರ್ಕ್ ಮಾಡಿಕೊಡಬೇಕು ಅನ್ನೋದು ನಮ್ಮ ಆಶಯ.
Kshetra Samachara
17/04/2022 02:07 pm