ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂದೂವರೆ ವರ್ಷದ ಬಳಿಕ ಓಪನ್ ಆಯ್ತು ಮೈಸೂರು ರಸ್ತೆ

ಬೆಂಗಳೂರು: ಈ ರಸ್ತೆ ಬೆಂಗಳೂರು ಮತ್ತು ಮೈಸೂರಿಗೆ ಹೋಗುವ ಮುಖ್ಯರಸ್ತೆ. ಆದ್ರೆ ಈ ರಸ್ತೆಯಲ್ಲಿ ಒಂದೂವರೆ ವರ್ಷದಿಂದ ಯಾವುದೇ ವಾಹನ ಸಂಚಾರ ಇರಲಿಲ್ಲ. ಯಾಕಂದ್ರೆ ಒಂದೂವರೆ ವರ್ಷದ ಹಿಂದೆ ಅಂದ್ರೆ 2020ರಲ್ಲಿ ಭಾರಿ ಮಳೆಯಿಂದ ವೃಷಭಾವತಿ ನದಿಯ ತಡೆಗೋಡೆ ಕುಸಿದಿತ್ತು. ಹೀಗಾಗಿ ಯಾವುದೇ ಸಂಚಾರ ಇರದೆ ರಸ್ತೆ ಕಂಪ್ಲೀಟ್ ಬಂದ್ ಆಗಿತ್ತು.

ಆದ್ರೆ‌ ಈಗ ಕಾಮಗಾರಿ ಪೂರ್ಣಗೊಂಡಿದೆ. ನಾಲೆಗೆ ಹೊಂದಿಕೊಂಡಿರುವ ರಸ್ತೆ ಕೂಡ ವಾಹನಗಳ‌ ಸಂಚಾರಕ್ಕೆ ಸಿದ್ಧವಾಗಿದೆ. ಇದರಿಂದ ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಆಗೋದು ತಪ್ಪಲಿದೆ.

ಈ‌ ಮಾರ್ಗ ಮಾರ್ಕೆಟ್‌ನಿಂದ, ಕೆಂಗೇರಿಉಪನಗರ, ಕುಂಬಳಗೋಡು, ಬಿಡದಿ, ಮೈಸೂರು ಮಾರ್ಗವಾದ ರಸ್ತೆಯಾಗಿದ್ದು, ಇದು ಕಂಪ್ಲೀಟ್ ಬಂದ್‌ ಆಗಿತ್ತು. ಇದರ ಬೆನ್ನಲ್ಲೇ ವಾಹನ ಸವಾರರು ಸಂಚರಿಸಲು ಬೇರೆ ಮಾರ್ಗ ಬಳಸುತ್ತಿದ್ದರು. ಕೆಂಗೇರಿಯಿಂದ ಮಾರ್ಕೆಟ್ ಹೋಗಲು ಇದ್ದ ಒನ್ ವೇ ರಸ್ತೆಯನ್ನ ಎರಡು ಮಾರ್ಗಗಳಿಗೆ ಸಂಚರಿಸಲು ಅವಕಾಶ ಇತ್ತು. ಆದ್ರೆ ಭಾರಿ ಸಂಚಾರ ಇರುವ ಈ ರಸ್ತೆಯೂ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಲಿದ್ದು ರಸ್ತೆ ಅಪಘಾತಗಳು ಹೆಚ್ಚಾಗಿತ್ತು.

ಒಟ್ಟಾರೆ ಇನ್ಮುಂದೆ ಆದ್ರೂ ಇದಕ್ಕೆಲ್ಲ ಬ್ರೇಕ್ ಬೀಳ್ತಾ ಇರೋದು ಸಂತಸದ ವಿಷಯ.

ರಂಜಿತ ಎಂ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

08/03/2022 08:11 pm

Cinque Terre

30.64 K

Cinque Terre

0

ಸಂಬಂಧಿತ ಸುದ್ದಿ