ಬೆಂಗಳೂರು:ನಮ್ಮ ಮೆಟ್ರೋ ರೈಲಿನಲ್ಲಿ ಇಂದು ಬೆಳಗ್ಗೆ ತಾಂತ್ರಿಕ ದೋಷ ಉಂಟಾಗಿತ್ತು. ನಗರದ ಮಾಗಡಿ ಮೆಟ್ರೋ ನಿಲ್ದಾಣದಲ್ಲಿ ಒಂದು ರೈಲಿನಲ್ಲಿ 9:10 ಸಮಯದಲ್ಲಿ ಕಾಣಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ನೇರಳೆ ಮಾರ್ಗದ ರೈಲುಗಳು ನಿಂತಲ್ಲೇ ನಿಂತಿದ್ದವು.
ಈ ವೇಳೆ, ಎಂಜಿ ರಸ್ತೆ, ನಾಡಪ್ರಭು ಕೆಂಪೇಗೌಡ ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಿತ್ತು. ಅಲ್ಲದೇ ಇಂದು ಸೋಮವಾರವಾಗಿದ್ದರಿಂದ ಜನರು ತಮ್ಮ ಕಚೇರಿಗಳಿಗೆ ಹೋಗಲು ತಡವಾಗಿದೆ.
ಬಳಿಕ ಮೆಟ್ರೋ ಸಿಬ್ಬಂದಿ ರೈಲಿನಲ್ಲಿ ತಾಂತ್ರಿಕ ದೋಷ ಸರಿಪಡಿಸಿದ್ದಾರೆ. ಬೆಳಗ್ಗೆ 10-30ಕ್ಕೆ ಮೆಟ್ರೋ ಸಂಚಾರ ಯಥಾಸ್ಥಿತಿ ಮುಂದುವರೆದಿದೆ ಎಂದು ಮೆಟ್ರೋ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
07/02/2022 05:01 pm