ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಣಿಕರ ಗಮನಕ್ಕೆ ಈ ಮಾರ್ಗದ ರೈಲು ಸೇವೆ ತಾತ್ಕಾಲಿಕ ರದ್ದು

ಬೆಂಗಳೂರು : ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿ ರೈಲು ಮಾರ್ಗದ ತಾತ್ಕಾಲಿಕ ತಡೆಯ ನಿಮಿತ್ತ ಇಂದು ರೈಲು ಸಂಖ್ಯೆ 15227 ಯಶವಂತಪುರ- ಮುಜಫರ್​​​ಪುರ ಎಕ್ಸ್​​ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ.

ನ.26 ರಂದು ಬೆಂಗಳೂರು ವಿಭಾಗದ ಹೊಸೂರು ಭಾಗದಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವ ನಿಮಿತ್ತ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ. ರೈಲು ಸಂಖ್ಯೆ 06262 ಹೊಸೂರು- ಕೆಎಸ್ಆರ್ ಬೆಂಗಳೂರು ಮೆಮು ರೈಲನ್ನು ಬೈಯ್ಯಪ್ಪನಹಳ್ಳಿಯಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 07315 ಯಶವಂತಪುರ-ಸೇಲಂ ಕಾಯ್ದಿರಿಸದ ವಿಶೇಷ ಪ್ಯಾಸೆಂಜರ್ ರೈಲನ್ನು ಲೊಟ್ಟೆಗೊಲ್ಲಹಳ್ಳಿಯಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

Edited By : Nirmala Aralikatti
Kshetra Samachara

Kshetra Samachara

25/11/2021 11:46 am

Cinque Terre

336

Cinque Terre

0

ಸಂಬಂಧಿತ ಸುದ್ದಿ