ಬೆಂಗಳೂರು: ಆ ಎಲ್ಲ ಪ್ರಯಾಣಿಕರು ದುಬೈನಿಂದ ಚೆನ್ನೈಗೆ ವಿಮಾನ ಮಾರ್ಗವಾಗಿ ತೆರಳುತ್ತಿದ್ದರು. ಆದ್ರೆ ಚೆನ್ನೈ ಮಹಾನಗರದ ಸುತ್ತಲಿನ ಹವಾಮಾನ ವಿಮಾನ ಸಂಚಾರಕ್ಕೆ ಪ್ರತಿಕೂಲವಾಗಿದ್ದರಿಂದ ಎಲ್ಲ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಇಳಿಸಲಾಗಿದೆ.
ಹೀಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ನೆರವಿಗೆ ಐರಾವತ ಬಸ್ ಬಂದಿದೆ. ಚೆನ್ನೈ ಏರ್‌ಪೋರ್‌ಟ್‌ನಲ್ಲಿ ಪ್ರತಿಕೂಲ ಹವಾಮಾನ ಹಾಗೂ ಲ್ಯಾಂಡಿಂಗ್ ಸಮಸ್ಯೆ ಆಗಿದ್ದರಿಂದ ಪ್ರಯಾಣವನ್ನು ಮಾರ್ಗಮಧ್ಯದ ಬೆಂಗಳೂರಿನಲ್ಲಿ ಮೊಟಕುಗೊಳಿಸಲಾಗಿದೆ. ಬೆಂಗಳೂರಿನಿಂದ ಈ ಎಲ್ಲ ಪ್ರಯಾಣಿಕರನ್ನು ಐರಾವತ ಬಸ್ ಮೂಲಕ ಚೆನ್ನೈಗೆ ಕಳುಹಿಸಿಕೊಡಲಾಗಿದೆ.
Kshetra Samachara
12/11/2021 11:01 am