ಬೆಂಗಳೂರು: ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರು ಸಮೀಪದ ಬಳಗಾರನಹಳ್ಳಿ ಸರ್ವೆ ನಂಬರ್ 27/1 ಎರಡು ಎಕರೆ 14 ಗುಂಟೆ ಜಾಗ ವಿವಾದಿತ ಜಮೀನಾಗಿದ್ದು ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿರುವಾಗಲೇ ಸೊತ್ತಿಗೆ ಪ್ರತಿವಾದಿ ನಾಗರಾಜರೆಡ್ಡಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ವಿಶ್ವನಾಥ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಇಂದು ಬಳಗಾರನಹಳ್ಳಿಯಲ್ಲಿ ವಾದಿ ಮಾದಯ್ಯ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.
ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ವಾದಿ ಶ್ರೀರಾಮ್, ಮಾದಯ್ಯ, ನಟರಾಜು, ಕ್ಯಾಲಸನಹಳ್ಳಿ ರಮೇಶ್, ವಕೀಲ ಸಿದ್ದೇಶ್, ಹಾಗೂ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಇನ್ನು ಈ ವಿವಾದಿತ ಜಮೀನಿಗೆ ಅತ್ತಿಬೆಲೆ ಸರ್ಕಲ್ ಇನ್ಸ್‌ಪೆಕ್ಟರ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಮುಂದೆ ಬಂದು ಉತ್ತರ ಕೊಡಲು ನಮಗೆ ಮೇಲಾಧಿಕಾರಿಗಳಿಂದ ಅನುಮತಿ ಬೇಕು. ಅದು ಸಿಕ್ಕರೆ ನಾನು ಅವರಿಗೆ ಉತ್ತರಿಸುತ್ತಿದ್ದೆ. ವಾದಿ-ಪ್ರತಿವಾದಿಗಳು ನನಗೆ ಇಬ್ಬರೂ ರಕ್ತ ಸಂಬಂಧಿಗಳಲ್ಲ. ನ್ಯಾಯಾಲಯದ ಆದೇಶಕ್ಕೆ ನಾನು ಬದ್ಧ ಕಾನೂನಿಗೆ ತಲೆ ಬಾಗುವ ವ್ಯಕ್ತಿ ನನ್ನ ಮೇಲೆ ಇವರುಗಳು ಮಾಡುವ ಆರೋಪಗಳು ಸತ್ಯಕ್ಕೆ ದೂರವಾದವು. ಇವರು ಹೇಳುವಂತೆ ನಾನು ಯಾವುದೇ ಯಾರ ಮೇಲೇನೂ ಸುಳ್ಳು ಕೇಸು ದಾಖಲು ಮಾಡಿದವನಲ್ಲ. ದೂರು ಕೊಟ್ಟರೆ ಅದರ ಬಗ್ಗೆ ಪರಿಶೀಲಿಸಿ ಕೇಸ್ ಮಾಡುವೆ ಇದಕ್ಕೂ ಮೀರಿ ನನ್ನ ಬಗ್ಗೆ ಯಾವುದಾದರೂ ದಾಖಲೆಗಳಿದ್ದರೆ ತೋರಿಸಲಿ ಅದು ಬಿಟ್ಟು ವಿನಾಕಾರಣ ನನ್ನ ಮೇಲೆ ಮಾಡುವ ಆರೋಪಗಳಿಗೆ ನಾನು ಅಂಜುವುದಿಲ್ಲ ದಾಖಲೆಗಳಿಲ್ಲದೆ ನನಗೆ ಹಾಗೂ ಇಲಾಖೆಗೆ ಮಸಿ ಬಳಿದರೆ ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ ಹಾಗೂ ಕಾನೂನಿಗೆ ತಲೆಬಾಗುವೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ವಿಶ್ವನಾಥ್ ತಿಳಿಸಿದರು.
Kshetra Samachara
10/09/2022 11:07 am