ಆನೇಕಲ್ : ಆನೇಕಲ್ ಉಪ ವಿಭಾಗದ ಪೊಲೀಸರು ಡಿವೈಎಸ್ಪಿ ಮಲ್ಲೇಶ್ ಹಾಗೂ ಆನೇಕಲ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ಚಂದಾಪುರದ ಸ್ವಾಮಿ ವಿವೇಕಾನಂದ ಕಾಲೇಜಿನ ಸಭಾಂಗಣ ದಲ್ಲಿ ಇಂದು ಪೋಷಕರು ಹಾಗೂ ಶಿಕ್ಷಕರು ಜೊತೆ ಶಾಂತಿಯುತ ಸಭೆ ಹಮ್ಮಿಕೊಳ್ಳಲಾಗಿತ್ತು.
ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳ ಆರಂಭವಾಗಲಿದ್ದು , ಮೊದಲ ಹಂತದಲ್ಲಿ ಹೈಸ್ಕೂಲ್ ತರಗತಿ ಆರಂಭವಾಗಲಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಈ ಸಭೆ ನಡೆಸಲಾಯಿತು.
ಇನ್ನು ಹೈಕೋರ್ಟ್ ಸೂಚನೆ ಮೇರೆಗೆ ತರಗತಿಗಳು ಆರಂಭವಾಗುತ್ತಿದೆ. ಸರ್ಕಾರ 9 ಹಾಗು 10ನೇ ತರಗತಿ ಆರಂಭಕ್ಕೆ ಸೂಚನೆ ನೀಡಿದೆ. ಶಾಲೆಗಳಿಗೆ ಹಿಜಾಬ್-ಕೇಸರಿ ಶಾಲಿಗೆ ಅನುಮತಿ ಇಲ್ಲ , ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುವಂತೆ ಸೂಚಿಸಿದೆ.
ಹೀಗಾಗಿ ಅಹಿತಕರ ಘಟನೆಗಳು ನಡೆದ ಹಾಗೆ ಬಂದೋಬಸ್ತ್ ಮಾಡಲಾಗಿದೆ, ಜೊತೆಗೆ ಶಾಲೆ ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿವಾದ ಸೃಷ್ಟಿ ಸುವ ಘಟನೆ ಗಮನಕ್ಕೆ ಬಂದರೆ ಮಾಹಿತಿ ಕೊಡುವಂತೆ ಮನವಿ ಮಾಡಿದ್ದಾರೆ.
Kshetra Samachara
13/02/2022 11:32 am